

ಕೊಳ್ಳೇಗಾಲ: ಪಟ್ಟಣದ ಪೀಸ್‌ಪಾರ್ಕ್ ಆವರಣದೊಳಗಿರುವ ಗ್ರಂಥಾಲಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಜಯವಿಭವಸ್ವಾಮಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಗ್ರಂಥಾಲಯದ್ದಲಿದ್ದ ಓದುಗರಿಗೆ ಗ್ರಂಥಾಲಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಶೌಚಗೃಹ ವ್ಯವಸ್ಥೆ ಪರಿಶೀಲಿಸಿದರು. ಗ್ರಂಥಾಲಯಕ್ಕೆ ಇನ್ನೂ ಏನೆಲ್ಲ ಸೌಲಭ್ಯಗಳು ಬೇಕೆಂಬ ಬಗ್ಗೆ ಜನರ ಬಳಿ ಚರ್ಚಿಸಿದರು.
ಮುಖಂಡರೊಬ್ಬರು ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಏಕೈಕ ಗ್ರಂಥಾಲಯವಾಗಿದೆ. ಓದುಗರಿಗೆ ಇನ್ನು ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಎಂಜಿಎಸ್‌ವಿ ಕಾಲೇಜು ಮೈದಾನ ದೊಳಗೆ ಗ್ರಂಥಾಲಯ ಸ್ಥಳಾಂತರಿಸಲು ಮನವಿ ಮಾಡಿದರು. ಇದರಿಂದ ಶಾಲೆಯ ಮಕ್ಕಳಿಗೂ ಅನುಕೂಲವಾಗಲಿದೆ ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಜಯವಿಭವಸ್ವಾಮಿ ಮಾತನಾಡಿ, ಪ್ರತಿ ನಿತ್ಯ ಬೆಳಗ್ಗೆ 4 ಹಾಗೂ ಸಂಜೆ 4 ಒಟ್ಟು 8 ಗಂಟೆಗಳ ಸಮಯವು ಗ್ರಂಥಾಲಯ ತಪ್ಪದೇ ಉಪಯೋಗವಾಗಬೇಕು. ಕೊಳ್ಳೇಗಾಲದ ಪಟ್ಟಣದ ಮಧ್ಯದಲ್ಲಿರುವ ಸಾರ್ವಜನಿಕ ಗ್ರಂಥಾಲಯ 2011ರಲ್ಲಿ ಆರಂಭಗೊಂಡಿದೆ. ಕೆಲವು ಸೌಲಭ್ಯಗಳು ಸಹ ಇದೆ. ಆದರೆ, ಪಟ್ಟಣ ಬೆಳೆವಣಿಗೆಗೆ ಪೂರಕವಾಗಿ ಗ್ರಂಥಾಲಯ ಅಭಿವೃದ್ಧಿ ಆಗಬೇಕಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕ ಗಳನ್ನು ಲಭ್ಯವಿರುವ ನಿಟ್ಟಿನಲ್ಲಿ ಕ್ರಮವಹಿ ಸಬೇಕಿದೆ. ಈ ಬಗ್ಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಟ್ಟಿಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಗ್ರಂಥಾಲಯ ಅಭಿವೃದ್ಧಿಗೆ ಅಗತ್ಯ ಕ್ರವಹಿಸುತ್ತೇನೆಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ, ಸಹ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಇದ್ದರು.