ಪ್ರತಿ ಗ್ರಾಮದಲ್ಲೂ ರುದ್ರಭೂಮಿ ಗುರತಿಸಿ

DSC_3753
Published on

ಯಾದಗಿರಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿವಿಧ ಸಮುದಾಯಗಳಿಗೆ ರುದ್ರಭೂಮಿಗೆ ಸ್ಥಳದ ಅಭಾವ ಎದುರಾದರೆ ಖಾಸಗಿಯಾಗಿ ಜಾಗ ಖರೀದಿಸುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ ತಾಕೀತು ಮಾಡಿದರು.

ಬುಧವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ಕರೆದಿದ್ದ ನೆರೆ ಹಾನಿ ಪರಿಹಾರ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ರುದ್ರಭೂಮಿ ಲಭ್ಯವಿರಬೇಕು. ಸಶ್ಮಾನ ಭೂಮಿ ಇಲ್ಲದಿರುವ ಗ್ರಾಮಗಳಲ್ಲಿ ಸಕರ್ಾರಿ ಭೂಮಿಯು ಗುರುತಿಸಬೇಕು. ಎ ಅಥವಾ ಬಿ ಕರಾಬು ಸೇರಿ ಸಕರ್ಾರಿ ಒಡೆತನದ ಭೂಮಿಗಳನ್ನು ಆಧ್ಯತೆ ಮೇರೆಗೆ ಕನಿಷ್ಠ ಒಂದು ಎಕರೆ ಭೂಮಿ ಪತ್ತೆ ಹಚ್ಚಬೇಕು. ಇಲ್ಲದಿದ್ದಲ್ಲಿ, ಖಾಸಗಿಯಾಗಿ ಖರೀದಿಸಿ, ರುದ್ರಭೂಮಿಯನ್ನು ನಿಮರ್ಿಸಿಕೊಡಬೇಕು ಎಂದು ಸೂಚಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳಡಿ ಕೇವಲ ಅರ್ಹರಿಗೆ ಮಾತ್ರ ಸಕರ್ಾರದಿಂದ ನೀಡಲಾಗುವ ಪಿಂಚಣಿ ಸೌಲಭ್ಯ ದೊರೆಯಬೇಕು. ಅದಕ್ಕೆ ಆಧಾರ್ ಲಿಂಕ್ ಮಾಡಲೇಬೇಕು, ಜಿಲ್ಲೆಯಲ್ಲಿ ಆಧಾರ್ ಲಿಂಕ್ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವರು, ಇದರಿಂದಾಗಿ ಬೊಗಸ್ ಪ್ರಕರಣಗಳನ್ನು ಪತ್ತೆಹಚ್ಚಿ ಅವುಗಳನ್ನು ತಡೆಗಟ್ಟಬಹುದಾಗಿದೆ ಹಾಗೂ ಅರ್ಹ ಫಲಾನುಭವಿಗಳಿಗೆ ಸಕರ್ಾರದ ಸೌಲಭ್ಯ ದೊರೆಯುವಂತೆ ಮಾಡಲು ಸಾಧ್ಯವಾಗಲಿದೆ ಎಂದರು.

ಪಿಂಚಣಿ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ಗಳಿಂದಲ್ಲೇ ಪಿಂಚಣಿ ಮೊತ್ತ ಸಂದಾಯವಾಗಬೇಕು, ಈ ಹಿಂದೆ ವಿವಿಧ ರೀತಿಯ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು 60 ವರ್ಷ ಮೇಲ್ಪಟ್ಟವರು, ವಯೋವೃದ್ಧರು ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಬರುತ್ತಿದ್ದರು, ಇನ್ಮುಂದೆ ಕಂದಾಯ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳೇ ಅರ್ಹ ಪಿಂಚಣಿದಾರರನ್ನು ಗುರುತಿಸಿ ಅವರಿಂದ ಅರ್ಜಿ ಪಡೆಯಬೇಕು ಎಂದು ಅವರು ನಿರ್ದೇಶನ ನೀಡಿದರು.

ಕೋವಿಡ್-19 ಸೋಂಕಿನ ಮಧ್ಯೆಯೇ ಬದುಕುವ ಅನಿವಾರ್ಯತೆ ಎದುರಾಗಿದೆ, ಈ ರೀತಿಯ ಸನ್ನಿವೇಶದಲ್ಲಿಯೇ ಅಭಿವೃದ್ದಿ ಪರ ಚಟುವಟಿಕೆಗಳನ್ನು ಕೈಗೊಳ್ಳಬೇಕಿರುತ್ತದೆ. ಈ ದಿಸೆಯಲ್ಲಿ ಎಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕಿದೆ, ಕಳೆದ ಸಾಲಿಗಿಂತಲೂ ಈ ಬಾರಿ ಪ್ರವಾಹದ ಮಟ್ಟ ಕಡಿಮೆಯಾಗಿದೆ. ಆದರೆ ಮನೆ, ಬೆಳೆ ಹಾನಿಯಾದವರಿಗೆ ಪರಿಹಾರ ಕೊಡಲು ಕಂದಾಯ ಇಲಾಖೆಯವರು ಶ್ರಮವಹಿಸಬೇಕು. ಪರಿಹಾರ ನೀಡಿದ ಮೊತ್ತ ಅರ್ಹ ಫಲಾನುಭವಿಗಳಿಗೆ ದೊರೆಯಬೇಕು. ಇದರಲ್ಲಿ ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶ ಕೊಡಬಾರದು ಎಂದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ನರಸಿಂಹ ನಾಯಕ, ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಕಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ್ ರೇವೂರ, ಜಿಪಂ ಅಧ್ಯಕ್ಷ ಬಸ್ಸನಗೌಡ ಪಾಟೀಲ್ ಪಾಟೀಲ್ ಯಾಡಿಯಾಪುರ, ಪ್ರಾದೇಶಿಕ ಆಯುಕ್ತ ಮಂಜುನಾಥ ಪ್ರಸಾದ, ಜಿಲ್ಲಾಧಿಕಾರಿ ಎಂ. ಕೂಮರ್ಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ ಸೋನಾವಣೆ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net