ಗುಣಮಟ್ಟ ಇಲ್ಲದಿದ್ದರೆ ಕಠಿಣ ಕ್ರಮ

MUDNAL
Published on

ಯಾದಗಿರಿ: ನಗರದ ವಿವಿಧ ವಾರ್ಡ್ಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ, ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬುಧವಾರ ಇಲ್ಲಿನ ವಾರ್ಡ್​ 25ರಲ್ಲಿ ನಗರಸಭೆಯ 14ನೇ ಹಣಕಾಸು ಯೋಜನೆಯಡಿ 24 ಲಕ್ಷ ರೂ.ವೆಚ್ಚದಲ್ಲಿ ಚಿತ್ತಾಪುರ ಮುಖ್ಯರಸ್ತೆಯಿಂದ ಬಸವೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ, ಚರಂಡಿ ಹಾಗೂ ಕಲ್ವಟ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಯಲ್ಲಿ ಒಂದು ವೇಳೆ ಕಳಪೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದಿದೆ. ಇಲ್ಲಿರುವ ವಾರ್ಡ್ ಗಳ ಜನತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾ ರ ಅಧಿಕಾರದಲ್ಲಿರುವುದರಿಂದ ನಾನು ವಿವಿಧ ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಕಾಮಗಾರಿ ಮಂಜೂರಾತಿ ಮಾಡಿಸಿಕೊಳ್ಳುವ ಮೂಲಕ ನಗರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಂತರ ಶಾಸಕರು 30ನೇ ವಾರ್ಡ್​ 17 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. ರಾಯುಕ್ತ ಬಕ್ಕಪ್ಪ, ಸದಸ್ಯರಾದ ಹಣಮಂತ ಇಟಗಿ, ಗಣೇಶ ದುಪ್ಪಲ್ಲಿ, ಸ್ವಾಮಿದೇವ ದಾಸನಕೇರಿ, ವಿಲಾಸ ಪಾಟೀಲ್, ಮಹಾದೇವಪ್ಪ ಯಲಸತ್ತಿ, ಶರಣಗೌಡ ಬಾಡಿಯಾಲ, ಪ್ರಕಾಶ ಚವ್ಹಾಣ್, ನಗರಸಭೆ ಇಂಜಿನಿಯರ್ ರಾಕೇಶರೆಡ್ಡಿ, ಭೀಮರೆಡ್ಡಿ ಮುದ್ನಾಳ್, ರಮೇಶ ದೊಡ್ಡಮನಿ, ಶರಣಗೌಡ ಅಲ್ಲಿಪೂರ, ಸುರೇಶ ಆಕಳ, ಮಾಳಿಂಗರಾಯ ಅನಕಸೂಗೂರ, ವೈಜನಾಥರೆಡ್ಡಿ ಪಾಟೀಲ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net