

ಬೆಳಗಾವಿ : ಪ್ರಸ್ತುತ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳು ಜನ ಕಿರಿಯ ಶ್ರೇಣಿಯ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಡಾ. ಈಶ್ವರ ಉಳ್ಳಾಗಡ್ಡಿ, ಬಿಮ್ಸ್ ಆಡಳಿತಾಧಿಕಾರಿ ಪ್ರೀತಂ ನಸ್ಲಾಪುರೆ, ಬೆಳಗಾವಿ ಉಪವಿಭಾಗಧಿಕಾರಿ ಬಲರಾಮ ಚವ್ಹಾಣ, ಬುಡಾ ಆಯುಕ್ತ ರಾಜಶೇಖರ ಡಂಬಳ, ಬುಡಾದ ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಪ್ರಶಾಂತ ಹನಗಂಡಿ ಅವರಿಗೆ ಮುಂಬಡ್ತಿ ನೀಡಿದ್ದಾರೆ. ಸದ್ಯ ಅದೇ ಸ್ಥಳದಲ್ಲಿ ಮುಂದುವರಿಸಿದ್ದಾರೆ.
ಸ್ಥಳ ನಿರೀಕ್ಷೆಯಲ್ಲಿದ್ದ ಸೈಯಿದಾ ಆಪ್ರೀನ್ ಭಾನು ಎಸ್ ಬಳ್ಳಾರಿ ಅವರನ್ನು ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ಹುದ್ದೆಗೆ ನಿಯೋಜನೆ ಮಾಡಿ ಸರ್ಕಾರ ಆದೇಶಿಸಿದೆ.