ಧರ್ಮಸ್ಥಳ ಸಂಸ್ಥೆಯಿಂದ ಪದಾಧಿಕಾರಿಗಳ ಸಮಾವೇಶ

njd news 4
ನಂಜನಗೂಡು ನಗರದ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಪದಾಧಿಕಾರಿಗಳ ಸಮಾವೇಶವನ್ನು ಜನಜಾಗೃತಿ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಎನ್.ಪ್ರಭುಸ್ವಾಮಿ ಉದ್ಘಾಟಿಸಿದರು.
Published on

ನಂಜನಗೂಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ನಗರದ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಎನ್.ಪ್ರಭುಸ್ವಾಮಿ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳುವುದು ಸುಲಭವಾಗದ ಕಾಲದಲ್ಲಿ ಧರ್ಮಸ್ಥಳ ಸಂಘವು ಮಹಿಳಾ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡಿದೆ. ಜನರ ಆರ್ಥಿಕ ಸಬಲತೆಗೆ ಬೆನ್ನೆಲುಬಾಗಿ ಶ್ರೀ ಕ್ಷೇತ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ರೂಪಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೋದಯ ಯೋಜನೆ ಸಾಲ ಕೊಡುವುದಿಲ್ಲ. ಆದರೆ ಬ್ಯಾಂಕಿನ ಮೂಲಕ ಸಾಲ ಒದಗಿಸುತ್ತದೆ. ಆರ್ಥಿಕವಾಗಿ ಶಿಸ್ತನ್ನು ಕಲಿಸುತ್ತದೆ. ಇದರಲ್ಲಿ ಸ್ತ್ರೀ ಶಕ್ತಿ ಪಾತ್ರ ಬಹಳ ಮುಖ್ಯವಾಗಿದೆ. ಯೋಜನೆಯನ್ನು ಜನರಿಗೆ ತಲುಪಿಸಿ ಸಂಸ್ಥೆಯು ಸಾಮಾಜಿಕ ಸೇವೆ ಮಾಡುತ್ತಾ ಬಂದಿವೆ ಎಂದು ತಿಳಿಸಿದರು.

ವಿಜಯಕುಮಾರ್ ನಾಗಿನಾಳ್, ಗುರುರಾಜ್, ಡಿ.ಜೆ.ಸೋಮಶೇಖರ್ ಮೂರ್ತಿ, ಎಚ್.ಕೃಷ್ಣಮೂರ್ತಿ, ಧರ್ಮಸ್ಥಳ ಕ್ಷೇತ್ರ ಯೋಜನಾಧಿಕಾರಿ ಧರ್ಮರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net