ಜನರಿಗೆ ಅಧಿಕಾರಿಗಳು ಅಲಭ್ಯ

Officers are unavailable to people
ಇಂಡಿ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯ.
Published on

ಇಂಡಿ: ಪಟ್ಟಣದಲ್ಲಿ ಶಿಣ ಇಲಾಖೆ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ನಿಂಬೆ ಅಭಿವೃದ್ಧಿ ಮಂಡಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ ವಿಜ್ಞಾನ ಕೇಂದ್ರ, ಭೂ ಸೇನಾ ನಿಗಮ ಸೇರಿ ಅನೇಕ ಇಲಾಖೆಗಳಲ್ಲಿ ಮೇಲಧಿಕಾರಿಗಳು ಇರುವುದೇ ಅಪರೂಪ.

ಅವರ ಮನೆಗಳು ವಿಜಯಪುರದಲ್ಲಿದ್ದು, ಇಂಡಿಗೆ ಬರುವುದು ಸುಮ್ಮನೆ ಎಂಬಂತಾಗಿದೆ ಇಂಡಿಯ ಇಲಾಖೆಗಳ ಆಡಳಿತ ವ್ಯವಸ್ಥೆ.
ಇಲಾಖೆಯ ಮುಖ್ಯಸ್ಥರು ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ನಿಯಮ ಇದೆ. ಆದರೆ ಇಲ್ಲಿ ಯಾರೂ ಕ್ಯಾರೆ ಎನ್ನುತ್ತಿಲ್ಲ.

ಶಿಣ ಇಲಾಖೆಯಲ್ಲಿ ೇತ್ರ ಶಿಣಾಧಿಕಾರಿ ಹಿಡಿದು ಅದೇ ಇಲಾಖೆಯ ಕಚೇರಿಯಲ್ಲಿನ ನಾಲ್ಕು ಅಧಿಕಾರಿಗಳು ವಿಜಯಪುರದಿಂದ ರೈಲಿನಿಂದ 12 ಗಂಟೆಗೆ ವಿಜಯಪುರ ಬಿಟ್ಟು ಇಂಡಿಗೆ ಒಂದು ಗಂಟೆಗೆ ಬರುತ್ತಾರೆ. ಮತ್ತೆ 4 ಗಂಟೆಯ ರೈಲಿಗೆ ಮರಳಿ ಹೋಗುತ್ತಾರೆ. ಒಂದು ವೇಳೆ ಯಾವುದೇ ಕಾರಣಕ್ಕೋ 4 ಗಂಟೆ ರೈಲು ತಪ್ಪಿದರೆ ಇಲಾಖೆಯ ವಾಹನ ತೆಗೆದುಕೊಂಡು ನಾಲ್ಕು ಜನ ವಿಜಯಪುರಕ್ಕೆ ಹೋಗುತ್ತಾರೆ. ಯಾವುದೇ ಶಾಲೆಗಳಿಗೆ ಭೇಟಿ ನೀಡುವುದಿಲ್ಲ, ಶಿಕರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆ ದೇವರೇ ಗತಿ.

ಇನ್ನು ಇಂಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಇಂಡಿ ಮತ್ತು ಸಿಂದಗಿ ಎರಡು ಕಡೆ ಅಧಿಕಾರದಲ್ಲಿದ್ದು, ವಿಜಯಪುರದಲ್ಲಿಯೂ ಕಾರ್ಯ ನಿರ್ವಹಿಸುತ್ತಾರೆ. ತುರ್ತುಸೇವೆಗೆಂದು ಯಾರಾದರೂ ಇವರಿಗೆ ಸಂಪರ್ಕ ಮಾಡಿದರೆ ಇಂಡಿಯ ಕರೆಗಳಿಗೆ ಸಿಂದಗಿಯಲ್ಲಿ ಇರುವುದಾಗಿ ಮತ್ತು ಸಿಂದಗಿಯ ಕರೆಗಳಿಗೆ ಇಂಡಿಯಲ್ಲಿ ಇರುವುದಾಗಿ ತಿಳಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರು ವಿಜಯಪುರದಲ್ಲಿ ಇರುತ್ತಾರೆ.

ಕಳೆದ ಎರಡು ವರ್ಷಗಳಿಂದ ಇಂಡಿಯ ಸಾರ್ವಜನಿಕ ಆಸ್ಪತ್ರೆಯ ಸ್ಥಿತಿ ಕೇಳುವವರಿಲ್ಲದಂತಿದೆ. 24 ಗಂಟೆ ಇಂಡಿಯಲ್ಲಿಯೇ ಇದ್ದು ಬಗೆ ಹರಿಸುವಂಥ ಸಮಸ್ಯೆಗಳು ಆಸ್ಪತ್ರೆಯಲ್ಲಿವೆ. ಆದರೆ ಅಧಿಕಾರಿಗಳು ತಮಗೂ ಅದಕ್ಕೂ ಏನೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಾರೆ. ಇಂಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಹೆರಿಗೆ ವೈದ್ಯರಿಲ್ಲ. ರಾತ್ರಿ ಹೆರಿಗೆಗೆ ಪಟ್ಟಣದವರು ಮತ್ತು ಗ್ರಾಮಸ್ಥರು ವಿಜಯಪುರಕ್ಕೆ ತೆರಳುವ ಅನಿವಾರ್ಯತೆ ಇದೆ.

ಕರ್ನಾಟಕದ ನಿಂಬೆ ಅಭಿವೃದ್ಧಿ ಮಂಡಳಿ ಮುಖ್ಯ ಕಚೇರಿ ಇಂಡಿಯಲ್ಲಿದೆ. ಆದರೆ ಅದಕ್ಕೆ ರಾಜ್ಯಮಟ್ಟದ ವ್ಯವಸ್ಥಾಪಕ ನಿರ್ದೇಶಕರಿದ್ದು ಅವರು ಇಂಡಿಗೆ ಬರುವುದು ಅಪರೂಪ. ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ತುಂಬಾ ಕಷ್ಟ ಪಟ್ಟು ಇಂಡಿಗೆ ನಿಂಬೆ ಅಭಿವೃದ್ಧಿ ಮಂಡಳಿ ತಂದಿದ್ದು, ಅದಕ್ಕೆ ಭೌಗೋಳಿಕ ಸೂಚ್ಯಾಂಕ ಕೊಡಿಸಿದ್ದಾರೆ. ಆದರೆ ನಿಂಬೆ ಅಭಿವೃದ್ಧಿ ಕುರಿತು ಯಾವುದೇ ರೀತಿಯ ವಿಚಾರ ಸಂಕಿರಣಗಳು ಮತ್ತು ತರಬೇತಿಗಳು ರೈತರಿಗಾಗಿ ನೀಡುವ ಕೆಲಸ ಆಗುತ್ತಿಲ್ಲ.

ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿದ್ದರೆ, ಸಾರ್ವಜನಿಕ ಕೆಲಸ ಬದಲಿಗೆ ಅಧಿಕಾರಿಗಳು ಸಭೆಯಲ್ಲಿ ಮುಳುಗುತ್ತಾರೆ. ಇದರ ಜೊತೆಗೆ ಹಿರಿಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್​ ನಡೆದರಂತೂ ಮುಗಿಯಿತು. ಇಡೀ ದಿನ ಇದರಲ್ಲಿಯೇ ಕಾಲ ಕಳೆಯುತ್ತಾರೆ. ಅಧಿಕಾರಿಗಳು ಕಚೇರಿಯಲ್ಲಿದ್ದರೂ ಸಾರ್ವಜನಿಕ ಸೇವೆಗೆ ಲಭ್ಯ ವಿರುವುದಿಲ್ಲ.

ತಾಲೂಕುಮಟ್ಟದ ಅಧಿಕಾರಿಗಳು ಸರಿಯಾಗಿ ಕೆಲಸಕ್ಕೆ ಬಾರದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸಿ ಪ್ರತಿ ಇಲಾಖೆಯ ಅಧಿಕಾರಿಗಳು ಸಹ ಪ್ರತಿದಿನ ಕಡ್ಡಾಯವಾಗಿ ತಮ್ಮ ತಮ್ಮ ಕಚೇರಿಗೆ ಬಂದು ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಬೀದ್​ ಗದ್ಯಾಳ, ಕಂದಾಯ ಉಪ ವಿಭಾಗಾಧಿಕಾರಿ, ಇಂಡಿ

ಅಬೀದ್​ ಗದ್ಯಾಳ, ಕಂದಾಯ ಉಪ ವಿಭಾಗಾಧಿಕಾರಿ, ಇಂಡಿ

ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಗೆ ಬರದೇ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಇಂಡಿಯಲ್ಲಿ ಸರ್ಕಾರಿ ಶಿಕರು, ಮುಖ್ಯೋಪಾಧ್ಯಾಯರು, ಸಿಬ್ಬಂದಿ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆಯಲಾಗುವುದು. ಎನ್​.ಎಚ್​.ನಾಗೂರ, ಡಿಡಿಪಿಐ ವಿಜಯಪುರ

ಎನ್​.ಎಚ್​.ನಾಗೂರ, ಡಿಡಿಪಿಐ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net