ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ

DVD Protest
ದೇವದುರ್ಗದ ತಾಲೂಕು ಆಡಳಿತ ಸೌಧ ಮುಂದೆ ದಲಿತ ಸಂಘಟನೆ ಒಕ್ಕೂಟ ಪ್ರತಿಭಟನೆ ನಡೆಸಿತು. ಮುಖಂಡರಾದ ಹನುಮಂತಪ್ಪ ಕಾಕರಗಲ್, ಯಲ್ಲಪ್ಪ ಆಲರ್ದಿ, ಶಿವರಾಜ ರುದ್ರಾಕ್ಷಿ, ಶಿವಪ್ಪ ಪಲಕನಮರಡಿ, ಬಸವರಾಜ ಅಕ್ಕರಕಿ ಇತರರಿದ್ದರು.
Published on

ದೇವದುರ್ಗ: ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಜಯಂತಿಯಂದು ನಿಯಮದ ಪ್ರಕಾರ ಕಾರ್ಯಕ್ರಮ ನಡೆಸದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ದಲಿತ ಸಂಘಟನೆಗಳ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸಿತು.

ಪಟ್ಟಣದ ನಗರಗುಂಡ ಕ್ರಾಸ್‌ನಲ್ಲಿರುವ ಶ್ರೀಬಾಬು ಜಗಜೀವನರಾಮ್ ಪುತ್ಥಳಿ ಬಳಿ ಭಾನುವಾರ ಏರ್ಪಡಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ನಿಯಮ ಪಾಲನೆ ಮಾಡದೆ ಅಪಮಾನ ಮಾಡಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಪುತ್ಥಳಿ ಸುತ್ತಮುತ್ತ ಸ್ವಚ್ಛತೆ ಕಾಪಾಡದೆ ಬೇಜವಾಬ್ದಾರಿ ತೋರಿದ್ದಾರೆ. ಜಯಂತಿ ದಿನದಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹಾಗೂ ಸಮಾಜ ಕಲ್ಯಾಣಾಧಿಕಾರಿ ರಾಜಕುಮಾರ ಮಾರ್ಪಣೆ ಮಾಡಿ ಪೂಜೆ ಸಲ್ಲಿಸದೆ ನಾಮ್ ಕೇ ವಾಸ್ತೆ ಎನ್ನುವಂತೆ ಪುತ್ಥಳಿ ಮುಂದೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದು, ಮೂವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ಮುಖಂಡರಾದ ಹನುಮಂತಪ್ಪ ಕಾಕರಗಲ್, ಯಲ್ಲಪ್ಪ ಆಲರ್ದಿ, ಶಿವರಾಜ ರುದ್ರಾಕ್ಷಿ, ಶಿವಪ್ಪ ಪಲಕನಮರಡಿ, ಬಸವರಾಜ ಅಕ್ಕರಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net