ದಲಿತರ ಕ್ಷೌರಕ್ಕೆ ನಕಾರ, ಸಲೂನ್ ಮಾಲೀಕನಿಗೆ ಬುದ್ದಿವಾದ

dalita
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಕಾಡನೂರಲ್ಲಿ ದಲಿತ ಸಮುದಾಯದವರಿಗೆ ಕ್ಷೌರ ಮಾಡಲು ನಿರಾಕರಿಸಿದ ಕ್ಷೌರದ ಅಂಗಡಿಗೆ ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಸಮಿತಿಯ ಸದಸ್ಯ ಓಬದೇನಹಳ್ಳಿ ಮುನಿಯಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿಷೇಧ ಹೇರಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಎಚ್ಚರಿಕೆ ನೀಡಿ ತಾಲೂಕು ಸವಿತಾ ಸಮಾಜದ ಮುಖಂಡರು ಎಲ್ಲ ಸಲೂನ್‌ಗಳ ಮಾಲೀಕರನ್ನು ಕರೆದು ಸಭೆ ಮಾಡಿ ತಿಳುವಳಿಕೆ ನೀಡುವಂತೆ ಸೂಚಿಸಿದರು.
ಗ್ರಾಮದಲ್ಲಿ ಪ್ರತಿಯೊಬ್ಬರು ಅಣ್ಣ-ತಮ್ಮಂದಿರಂತೆ ಸೌಹಾರ್ದಯುತವಾಗಿ ಜೀವನ ಮಾಡಬೇಕು. ಪ್ರಜಾಪ್ರಭುತ್ವದಲ್ಲೂ ಅಸ್ಪೃಶ್ಯತೆಯ ಭೂತ ಇನ್ನೂ ಜೀವಂತವಾಗಿರುವುದು ವಿಪರ್ಯಾಸ. ಮಾನವೀಯತೆ ಮರೆತು ಮೇಲು, ಕೀಳು ಎಂಬ ಭಾವನೆಯಲ್ಲಿ ಜೀವನ ಸಾಗಿಸುತ್ತಿರುವ ಮೌಢ್ಯ ಸಮಾಜ ಇನ್ನಾದರೂ ಬದಲಾಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net