ಬೆತ್ತಲೆ ಫೋಟೋ ಭಯದಿಂದ ಹಣ ಕಳೆದುಕೊಂಡ ಅಧಿಕಾರಿ

Cyber Crime
Published on

ಮೈಸೂರು: ಸಾಮಾಜಿಕ ಜಾಲ ತಾಣದ ಮೂಲಕ ಪರಿಚಯವಾದ ಮಹಿಳೆಯು ಬೆತ್ತಲೆ ಫೋಟೋ ಹೆಸರಿನಲ್ಲಿ ಬೆದರಿಸಿ ಸರ್ಕಾರಿ ಅಧಿಕಾರಿಯೊಬ್ಬರಿಂದ 4.50 ಲಕ್ಷ ರೂ. ಲಪಟಾಯಿಸಿದ್ದಾಳೆ.


ನಗರದ ವಿಜಯನಗರ ನಿವಾಸಿಯಾದ ಸರ್ಕಾರಿ ಅಧಿಕಾರಿ ಅಪರಿಚಿತರ ಕಿರುಕುಳದಿಂದ ವಂಚನೆಗೊಳಗಾಗಿದ್ದಾರೆ. ಅಧಿಕಾರಿಗೆ ಭೂಮಿಕಾ ಶ್ರೀ ಎಂಬ ಹೆಸರಿನ ಮಹಿಳೆ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಾಳೆ.

ನಂತರ ಆಕೆ ಅಧಿಕಾರಿಗೆ ವ್ಯಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿ ನಿಮ್ಮ ಭಾವಚಿತ್ರದೊಂದಿಗೆ ಬೆತ್ತಲೆ ಫೋಟೋವನ್ನು ಸೇರಿಸಿ ನಿಮ್ಮ ಮನೆಯವರಿಗೆ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾಳೆ. ಇದರಿಂದ ಹೆದರಿದ ಅಧಿಕಾರಿ ಹಣವನ್ನು ಕೊಟ್ಟಿದ್ದಾರೆ.

ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಅಧಿಕಾರಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net