ಕರಾವಳಿಯಲ್ಲಿ ಹೋರಾಟಕ್ಕೆ ಅಧಿಕಾರಿ ನಾಯಕತ್ವ

swatantrya horata
ಜಗದೀಶ ಹೆಗ್ಡೆ.
Published on

ನರೇಂದ್ರ ಎಸ್. ಮರಸಣಿಗೆ ಹೆಬ್ರಿ
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಬಿರುಸ್ಸಾಗಿದ್ದ ಸಂದರ್ಭ ಕರ್ನಾಟಕ ಮುಂಚೂಣಿಯಲಿದ್ದು, ಕರಾವಳಿ ಭಾಗದ ಹೋರಾಟದ ಜವಾಬ್ದಾರಿ ವಹಿಸಿದವರು ಕಾರ್ಕಳ ತಾಲೂಕಿನ ಪಡುಕುಡೂರುಬೀಡು ಧರ್ಮರಾಜ ಅಧಿಕಾರಿ (ಎಂ.ಡಿ.ಅಧಿಕಾರಿ).

1942ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ದೇಶಾದ್ಯಂತ ಕ್ವಿಟ್ ಇಂಡಿಯಾ ಚಳವಳಿ ನಡೆಯುತ್ತಿದ್ದವು. ಮಂಗಳೂರಿನ ಕೇಂದ್ರ ಮೈದಾನದಲ್ಲೂ 10 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಈ ನಡುವೆ ಎಂ.ಡಿ.ಅಧಿಕಾರಿ ಹೋರಾಟಗಾರರ ಉದ್ದೇಶೀಸಿ ಆವೇಶದ ಮಾತುಗಳನ್ನಾಡುತ್ತಿದ್ದರು. ಪೊಲೀಸರು ಅವರನ್ನು ಸೆರೆಮನೆಗೆ ತಳ್ಳಿದರು. ಈ ಮೂಲಕ ಪಡುಕುಡೂರಿನ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದವರು ಪಡುಕುಡೂರುಬೀಡು ಎಂ.ಡಿ.ಅಧಿಕಾರಿ.

ಎಂ.ಡಿ.ಅಧಿಕಾರಿ ಕಾರ್ಕಳ ತಾಲೂಕಿನ ವರಂಗದ ಜೈನ ಕೃಷಿ ಕುಟುಂಬದ ಪುತ್ರ. ಅವರ ಹಿರಿಯರು ವರಂಗದ ಬಸದಿಯನ್ನು ಅಭಿವೃದ್ಧಿಪಡಿಸಿ ಧರ್ಮ ಕಾರ್ಯಗೊಂಡಿದ್ದಾರೆ. ಈ ಯುವಕನಿಗೆ ಬಾಲ್ಯದಿಂದಲೂ ರಾಷ್ಟ್ರ ಚಿಂತನೆಯ ಜತೆಗೆ ಗಾಂಧೀಜಿ ಪ್ರಭಾವ ಅತೀಯಾಗಿ ಬೀರಿತ್ತು.

1937ರಲ್ಲಿ ಎಂ.ಡಿ ಅಧಿಕಾರಿ ಪ್ರಚಾರಕ್ಕೆ ಧುಮುಕಿದ್ದು, 1938ರಲ್ಲಿ ಕಾರ್ಕಳ ಕಾಂಗ್ರೆಸ್ ಅಧ್ಯಕ್ಷರೂ ಆದರು. 1942ರಲ್ಲಿ ಆಗಿನ ಜಿಲ್ಲಾಧ್ಯಕ್ಷ ಶ್ರೀನಿವಾಸ ಮಲ್ಯರ ಬಂಧನದ ಕಾರಣದಿಂದ ಎಂ.ಡಿ ಅಧಿಕಾರಿ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡರು. ಬಳಿಕ ಮಂಗಳೂರಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೇತೃತ್ವ ವಹಿಸಿದರು. ಪತಿ ಅಧಿಕಾರಿ ಹೋರಾಟಕ್ಕೆ ಪತ್ನಿ ಕಮಲಾವತಿ ಸಾಥ್ ನೀಡಿದರು. ಕರಾವಳಿ ಕರ್ನಾಟಕದ ಸ್ವಾತಂತ್ರೃ ಹೋರಾಕ್ಕೆ ಕಿಚ್ಚು ಹಚ್ಚಿದ್ದು, ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಕಸ್ತೂರ್ಬಾ ಹೆಸರಿನಲ್ಲಿ ನಿಧಿ ಸ್ಥಾಪಿಸಿದರು. ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಶಂಕರ ಶೆಟ್ಟಿ ನೇತೃತ್ವ

ಪಡಕುಪರ್ಕಳ ಶಂಕರ ಶೆಟ್ಟಿ ಚಿಂತನೆಯಲ್ಲಿ ಎಂ.ಡಿ.ಅಧಿಕಾರಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪನೆ ಕಾರ್ಯಕ್ಕೆ ಯೋಜನೆ ರೂಪಿಸಲಾಯಿತು. ಪಡುಕುಡೂರು ಪಟೇಲರ ಮನೆ ಜಗದೀಶ ಹೆಗ್ಡೆ ನೇತೃತ್ವದಲ್ಲಿ ಒಂದು ವರ್ಷದಿಂದ ಪುತ್ಥಳಿ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಉಪಸಮಿತಿಗಳು, ಗ್ರಾಮಸ್ಥರು ಕೈಜೋಡಿಸುತ್ತಿದ್ದಾರೆ. ಆಗಸ್ಟ್ 15ರಂದು ಪಡುಕುಡೂರು ಶಾಲೆಯ ಬಳಿ ವಿಶೇಷ ಪೀಠದಲ್ಲಿ ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಪ್ರತಿಷ್ಠಾಪನೆಗೊಳ್ಳಲಿದೆ.

ಅರುಣ್ ಯೋಗಿರಾಜ್ ಕೆತ್ತನೆ

ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಮೂರ್ತಿ ಕೆತ್ತಿ ವಿಶ್ವವಿಖ್ಯಾತರಾದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಕೈಚಳಕದಲ್ಲಿ ಪುತ್ಥಳಿ ಮೂಡಿಬಂದಿದೆ.

ಮಹಾನ್ ಕಾರ್ಯದಲ್ಲಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷತೆ ಹೊಣೆ ಕೊಟ್ಟು ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ನಾನು ಸರ್ವರಿಗೂ ಋಣಿ. -ಜಗದೀಶ ಹೆಗ್ಡೆ ಪಟೇಲರ ಮನೆ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ

-ಜಗದೀಶ ಹೆಗ್ಡೆ ಪಟೇಲರ ಮನೆ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ

-ಜಗದೀಶ ಹೆಗ್ಡೆ ಪಟೇಲರ ಮನೆ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ

-ಜಗದೀಶ ಹೆಗ್ಡೆ ಪಟೇಲರ ಮನೆ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net