ನಾಮಫಲಕ ಅಳವಡಿಸಲು ಒತ್ತಾಯ

dj khalli prob
Published on

ಕೊಂಡ್ಲಹಳ್ಳಿ: ಗ್ರಾಮದ ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರ, ಬಿ.ಜಿ.ಕೆರೆ, ಓಬಣ್ಣನಹಳ್ಳಿ ಮಾರ್ಗ ಸೂಚಿಸುವ ನಾಮಫಲಕ ಬಿದ್ದಿದೆ.

ಮಲ್ಪೆ-ಮೊಳಕಾಲ್ಮೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿನ ನೆಹರು ವೃತ್ತದ ವ್ಯಾಪ್ತಿಯಲ್ಲಿ ನಾಮಫಲಕ ಅಳವಡಿಸಲಾಗಿತ್ತು. ಬಿದ್ದು ತಿಂಗಳು ಕಳೆದರೂ ಅದನ್ನು ಮರು ಸ್ಥಾಪಿಸದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಇಷ್ಟಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿಲ್ಲ.

ತಕ್ಷಣವೇ ಅಧಿಕಾರಿಗಳು ಬೋರ್ಡ್ ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಾಮಫಲಕ ಬಿದ್ದಿರುವ ಬಗ್ಗೆ ಮಾಹಿತಿ ಇರಲಿಲ್ಲ. ಕೂಡಲೇ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೋರ್ಡ್ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಜಿ.ಎಸ್.ಲಕ್ಷ್ಮಿನಾರಾಯಣ್, ಎಇಇ ಮೊಳಕಾಲ್ಮೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net