ರಮ್ಮಿ ಆಟದಲ್ಲಿ ಮುಳುಗಿದ್ದ ಅಧಿಕಾರಿ

raichur
raichur
Published on
ರಾಯಚೂರು ಜಿಲ್ಲಾ  ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಅರಣ್ಯ  ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ರಮ್ಮಿ ಆಟದಲ್ಲಿ ಮಗ್ನರಾಗಿದ್ದ ಅಧಿಕಾರಿಯ ವರ್ತನೆಗೆ ಸಚಿವ ಗರಂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿ ವಿರುದ್ದ ಕ್ರಮಕ್ಕೆ ಸೂಚಿಸಿದ್ದಾರೆ.
ಒಂದು ಕಡೆ ಶಾಸಕರು, ಸಚಿವರ ಮಧ್ಯೆ ಕೆಡಿಪಿ ಸಭೆಯಲ್ಲಿ ಬಿರುಸಿನ ಚರ್ಚೆ, ಆಕ್ರೋಶ, ಅಸಮಾಧಾನ, ಪ್ರತಿಭಟನೆ ನಡೆದಿತ್ತು. ಆದರೆ ಪ್ರವಿಣ್ ಅವರು ಸಭೆಯ ಆಗುಹೋಗುಗಳ ಬಗ್ಗೆ ಆಲಿಸದೇ ಆಟದಲ್ಲಿ ಮಗ್ನರಾಗಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿ ವರ್ತನೆಗೆ  ಸಚಿವರು ಗರಂ ಅಗಿ ತರಾಟೆಗೆ ತೆಗೆದುಕೊಂಡರು. ಸಭೆಯಿಂದ ಮೊದಲು ಹೊರ ನಡೆಯುವಂತೆ ಗದರಿಸಿ ಕೂಡಲೇ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ನಿತೀಶ್ ಕೆ.,ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net