

ತರೀಕೆರೆ: ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದಿದ್ದ ಬ್ರಿಟಿಷರ ಕಾಲದ ಪಾರಂಪರಿಕ ಕಟ್ಟಡ ನವೀಕರಣಗೊಳಿಸಿದ್ದರಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಅನುಕೂಲವಾಗಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ಸೋಮವಾರ ಪಟ್ಟಣದಲ್ಲಿ ನವೀಕರಿಸಿರುವ ಬ್ರಿಟಿಷರ ಕಾಲದ ಪಾರಂಪರಿಕ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಜನ ಜಾಗೃತರಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಪರಿಕಲ್ಪನೆ ಸಾಕಾರಗೊಳ್ಳುವಂತಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಸಿ.ಜಿ.ಗೀತಾ ಮಾತನಾಡಿ, ಪಾಳು ಬಿದ್ದಬ್ರಿಟೀಷರ ಕಾಲದ ಪಾರಂಪರಿಕ ಕಟ್ಟಡ ನವೀಕರಣದ ನಂತರ ಮತ್ತಷ್ಟು ಇಲಾಖೆ ಕಟ್ಟಡಗಳಿಗೆ ನವೀಕೃತ ಭಾಗ್ಯ ಲಭಿಸುತ್ತಿದೆ. ಈ ಸಾಲಿಗೆ ತಹಸೀಲ್ದಾರ್ ಕಚೇರಿ ಕೂಡ ಸೇರಿರುವುದು ಸಂತಸ ತಂದಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಜನ ಸಾಮಾನ್ಯರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.
ತಾಪಂ ಪ್ರಭಾರ ಇಒ ಟಿ.ಎಸ್.ಗಣೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಸಿಡಿಪಿಒ ಕೆ.ಸಿ.ಜ್ಯೋತಿಲಕ್ಷ್ಮಿ, ಎಸಿಡಿಪಿಒ ಎನ್.ಚರಣ್ರಾಜ್, ಜನ ಚಿಂತನ ಸಂಸ್ಥೆ ಮುಖ್ಯಸ್ಥ ಟಿ.ಎನ್.ವೀರಭದ್ರಪ್ಪ, ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಮುರುಗೇಶಪ್ಪ ಇದ್ದರು.