ಭೂ ಸ್ವಾಧೀನಾಧಿಕಾರಿ ಕಚೇರಿ ಸ್ಥಳಾಂತರ ಬೇಡ

Untitled design (4)
ರಾಯಚೂರಿನ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.
Published on

ರಾಯಚೂರು: ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿಯಲ್ಲಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸಿರುವುದನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.

ಕಚೇರಿಯನ್ನು ಚಿಕ್ಕಹೊನ್ನಕುಣಿಗೆ ಸ್ಥಳಾಂತರಿಸಬೇಕು

ಸಂಘದ ನಿಯೋಗ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರಗೆ ಬುಧವಾರ ಸಲ್ಲಿಸಿ, ಕಚೇರಿ ಸ್ಥಳಾಂತರದಿಂದ ದೇವದುರ್ಗ ತಾಲೂಕಿನ ರೈತರು ಮತ್ತು ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದ್ದು, ಕೂಡಲೇ ಕಚೇರಿಯನ್ನು ಚಿಕ್ಕಹೊನ್ನಕುಣಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.


ಹಲವು ವರ್ಷಗಳಿಂದ ಚಿಕ್ಕಹೊನ್ನಕುಣಿಯಲ್ಲಿಯೇ ಇದ್ದ ಕಚೇರಿಯನ್ನು ಯಾವ ಕಾರಣಕ್ಕೆ ರಾಯಚೂರಿಗೆ ಸ್ಥಳಾಂತರಿಸಲಾಯಿತು ಎನ್ನುವುದು ತಿಳಿದು ಬಂದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಬಹುತೇಕ ಕಾರ್ಯವ್ಯಾಪ್ತಿ ದೇವದುರ್ಗ ತಾಲೂಕಿನಲ್ಲಿದ್ದು, ಕಚೇರಿಯನ್ನು ಮೊದಲಿನಂತೆ ಮುಂದುವರಿಸಬೇಕು.

ಕಾಲುವೆ ಹೋಗದಿದ್ದರೂ ಪಹಣಿಯಲ್ಲಿ ಜಮೀನು ಕಡಿತಗೊಳಿಸಲಾಗಿದೆ

ದೇವದುರ್ಗ ತಾಲೂಕಿನ ಕೋತಿಗುಡ್ಡ ಗ್ರಾಮದಲ್ಲಿ ತಿಮ್ಮಪ್ಪ ಎಂಬುವವರಿಗೆ ಸೇರಿದಂತೆ ಜಮೀನಿನಲ್ಲಿ ಕಾಲುವೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಪಹಣಿಯಲ್ಲಿ 20 ಗುಂಟೆ ಜಮೀನು ಕಡಿತಗೊಳಿಸಲಾಗಿದೆ. ಕಾಲುವೆ ಹೋಗದಿದ್ದರೂ ಪಹಣಿಯಲ್ಲಿ ಜಮೀನು ಕಡಿತಗೊಳಿಸಲಾಗಿದೆ. ಕೂಡಲೆ ಅದನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ನಾಯಕ, ಪದಾಧಿಕಾರಿಗಳಾದ ಮಸ್ತಾನಿ ನಾಯಕ, ಸಾಜೀದ್ ಹುಸೇನ್, ಈರಣ್ಣ, ಶಿವಪ್ಪ ಆಲ್ಕೂರ್, ಸಂಗಮೇಶ ನಾಯ್ಕ, ಖಾದರಪಾಷಾ, ಹಾಜಿ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net