ಕಮತನೂರು ಕೆರೆಗೆ ಬಾಗಿನ ಅರ್ಪಣೆ

29Snk1
Published on

ಸಂಕೇಶ್ವರ: ನದಿಯಿಂದ ಕೆರೆಗಳಿಗೆ ನೀರು ತುಂಬುತ್ತಿರುವುದರಿಂದ ಬಹುತೇಕ ಕೆರೆಗಳು ಭರ್ತಿಯಾಗಿ ರೈತರ ಬದುಕು ಹಸನಾಗಿದೆ ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.

ಸಮೀಪದ ಕಮತನೂರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿ, ನಾವಿರುವವರೆಗೂ ಹುಕ್ಕೇರಿ ತಾಲೂಕಿನ ಸಂಘ-ಸಂಸ್ಥೆಗಳ ಮೇಲೆ ಹೊರಗಿನವರು ಆಡಳಿತ ನಡೆಸುವ ಅವಶ್ಯಕತೆಯಿಲ್ಲ ಎಂದರು.

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಸಚಿವರಾಗಿದ್ದ ದಿ. ಉಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಅವರ ಆಡಳಿತದಲ್ಲಿ ಕ್ಷೇತ್ರದ ಸಹಕಾರಿ, ಕೃಷಿ ಕ್ಷೇತ್ರವನ್ನು ಸಮೃದ್ಧವಾಗಿ ನೆಲೆಯೂರುವಂತೆ ಮಾಡಲಾಗಿದೆ. ಜನರಿಗೆ ಹೆಚ್ಚಿನ ಸೇವಾ ಸೌಕರ್ಯ ಕಲ್ಪಿಸಲು ಬದ್ಧರಾಗಿದ್ದಾರೆ ಎಂದರು.

ಗಜಾನನ ಕ್ವಳ್ಳಿ, ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಕಲ್ಲಣ್ಣ ಚೌಗಲಾ, ಕೆ.ಎಂ.ನಿಂಗನೂರಿ, ರೋಹಣ ನೇಸರಿ, ಪ್ರಶಾಂತ ಪಾಟೀಲ, ಸಂತೋಷ ಪಾಟೀಲ, ಮಲ್ಲಪ್ಪ ಅಂಕಲೆ, ವಿರೂಪಾಕ್ಷಿ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net