ಸಮಯ, ಪರಿಶ್ರಮ ಭಗವಂತನಿಗೆ ಅರ್ಪಣೆ : ಕೀರ್ತೇಶ್ವರ ಕ್ಷೇತ್ರದಲ್ಲಿ ಶ್ರೀ ವಿಜಯಾನಂದ ಸ್ವಾಮೀಜಿ ಆಶೀರ್ವಚನ

New Project (1)
Published on

ಮಂಜೇಶ್ವರ: ಬ್ರಹ್ಮಕಲಶದ ಸೊಬಗು ನೋಡುವಾಗ ಎಲ್ಲರೂ ಮನಸ್ಸಿನ ಭಾವನೆ-ಯೋಚನೆ ಹೊರಗಿಟ್ಟು, ತಮ್ಮ ಸಮಯ ಶಕ್ತಿ ಪರಿಶ್ರಮಗಳನ್ನು ಭಗವಂತನಿಗೆ ಅರ್ಪಣೆ ಮಾಡಿರುವುದು ಕಂಡುಬರುತ್ತದೆ ಎಂದು ಬೈಲಹೊಂಗಲ ಶ್ರೀ ವಿಜಯಾನಂದ ಸ್ವಾಮೀಜಿ ಹೇಳಿದರು.

ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಆರನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಶರವು ಶ್ರೀಕ್ಷೇತ್ರದ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಶಿಲೆಶಿಲೆ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರವೀಶ್ ಭಟ್, ಚಲಚಿತ್ರ ನಿರ್ಮಾಪಕ ಲಾಂಚು ಲಾಲ್ ತೊಕ್ಕೊಟ್ಟು, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಧಾರ್ಮಿಕ ಮುಂದಾಳು ನವೀನ್ ರಾಜ್, ಹೊಸಂಗಡಿ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ನಟ್ಟಿಬೈಲು, ಧಾರ್ಮಿಕ ಮುಂದಾಳು ಯಾದವ ಕೀರ್ತೆಶ್ವರ, ಸಾಮಾಜಿಕ ಕಾರ್ಯಕರ್ತ ನವೀನ್ ಮೊಂತೆರೋ ಮಂಜೇಶ್ವರ ಶುಭ ಹಾರೈಸಿದರು.

ತೃಪ್ತಿ, ವರ್ಷ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಉದಯ ಕುಮಾರ್ ಆನೆಬಾಗಿಲು ಸ್ವಾಗತಿಸಿದರು. ವಿಜೆ ಮಧುರಾಜ್ ಗುರುಪುರ ನಿರೂಪಿಸಿದರು. ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ವಂದಿಸಿದರು.

ವೈದಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ ಅಂಕುರ ಪೂಜೆ, ಗಣಪತಿ ಹೋಮ, 7.56 ರ ಮೀನ ಲಗ್ನದಲ್ಲಿ ಮಹಾಗಣಪತಿ, ಶಾಸ್ತಾ ದೇವರಿಗೆ ಬ್ರಹ್ಮಕಲಶಾಭಿಷೇಕ, 11.10 ಕ್ಕೆ ಶ್ರೀ ದುರ್ಗಾ ದೇವಿಯ ಬ್ರಹ್ಮಕಲಶಾಭಿಷೇಕ, ಶ್ರೀ ಶಿವ ಸಹಸ್ರನಾಮಾವಳಿ ಯಾಗ, ರಕೇಶ್ವರಿ ದೈವಗಳ ಕಲಶಾಭಿಷೇಕ, ಮಹಾಪೂಜೆ ಅನ್ನಸಂತರ್ಪಣೆ, ಕೂಲ್ ಗೈಸ್ ಕೀರ್ತೇಶ್ವರ ಪ್ರಾಯೋಜಕತ್ವದಲ್ಲಿ ಶ್ರೀ ಗುರುಕೃಪಾ ಭಜನಾ ಮಂಡಳಿ, ಉಳಿಯತಡ್ಕ, ಮಧೂರು, ಕಾಸರಗೋಡು ತಂಡದಿಂದ ಭಜನಾ ಸಂಕೀರ್ತನೆ, ಸಂಜೆ ಬ್ರಹ್ಮ ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾಪೂಜೆ, ಕುಂಭೇಶ ಕರ್ಕರಿ ಪೂಜೆ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು. ಕೂಲ್‌ಗೈಸ್ ಕೀರ್ತೇಶ್ವರ ಪ್ರಾಯೋಜಕತ್ವದಲ್ಲಿ ಬೈಲೂರು ಚೈತನ್ಯ ಕಲಾವಿದರಿಂದ ‘ಅಷ್ಟಮಿ’ ತುಳು ಸಾಂಸಾರಿಕ ನಾಟಕ ಪ್ರದರ್ಶನಗೊಂಡಿತು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳ ಸಾಧಕರಾದ ಈಶ್ವರ ಮಲ್ಪೆ, ಲಂಚು ಲಾಲ್ ತೊಕ್ಕೊಟ್ಟು, ಚಿತ್ರನಟ ಪೃಥ್ವಿ ಅಂಬಾರ್, ನವೀನ್ ಮೊಂತೆರೋ ಮಂಜೇಶ್ವರ, ಪ್ರಕಾಶ್ ತೂಮಿನಾಡು, ಬಾಲಕೃಷ್ಣ ಮಾಸ್ತರ್ ಮಂಜೇಶ್ವರ, ಪ್ರಿಯಾಂಕ ಲತೀಶ್ ತೊಕ್ಕೊಟ್ಟು ಅವರನ್ನು ಕೂಲ್‌ಗೈಸ್ ವತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net