ಫೆ.22, 23ರಂದು ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ

horekanike
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.22, 23ರಂದು ಬೃಹತ್ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಲಿದೆ ಎಂದು ಹಸಿರುವಾಣಿ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. 22ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಅರ್ಪಿಸುವ ದಕ್ಷಿಣವಾಹಿನಿ ಹೊರೆಕಾಣಿಕೆ ಹೆಜಮಾಡಿ ಗಡಿಯಾಗಿ ಮೂಳೂರು ಕೊಪ್ಪಲಂಗಡಿಗೆ ಬಂದು ಅಲ್ಲಿಂದ ಮೆರವಣಿಗೆ ಹೊಸ ಮಾರಿಗುಡಿ ದೇವಳ ತಲುಪಲಿದೆ. ಉಡುಪಿ ಜಿಲ್ಲೆಯಿಂದ ಸಮರ್ಪಿಸಲ್ಪಡುವ ಉತ್ತರವಾಹಿನಿ ಹೊರೆಕಾಣಿಕೆ 23ರಂದು ಪಾಂಗಾಳ ಸೇತುವೆ ಬಳಿಯಿಂದ ಹೊಸ ಮಾರಿಗುಡಿ ತಲುಪಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಎಸ್‌ಡಿಸಿಸಿ ಬ್ಯಾಂಕ್, ಸ್ವಸಹಾಯ ಸಂಘಗಳ 10 ಸಾವಿರ ಮಂದಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಗಳ ಸದಸ್ಯರು ಹೊರೆಕಾಣಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯಿಂದ ಹೊರೆಕಾಣಿಕೆ ಸಂಗ್ರಹಣೆ ಆರಂಭವಾಗಿದ್ದು, ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಂಗ್ರಹಿಸುವ ಕುರಿತು ಸಭೆಗಳನ್ನು ನಡೆಸಲಾಗಿದೆ. ಹೊರೆಕಾಣಿಕೆಯನ್ನು ಅಚ್ಟುಕಟ್ಟಾಗಿ ನಿರ್ವಹಿಸಲು ನಾಲ್ಕುನೂರು ಮಂದಿ ಸ್ವಯಂಸೇವಕರ ತಂಡ ತಯಾರಾಗಿದೆ ಎಂದು ಮಾಹಿತಿ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿವಿಧ ಸಮಿತಿ ಪ್ರಮುಖರಾದ ಮಾಧವ ಪಾಲನ್, ಅರುಣ್ ಶೆಟ್ಟಿ ಪಾದೂರು, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಶಾಂತಲತಾ ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶ್ರೀಕರ್ ಶೆಟ್ಟಿ ಕಲ್ಯಾ, ಮೋಹನ್ ಬಂಗೇರ, ಹರಿಯಪ್ಪ ಕೋಟ್ಯಾನ್, ಅವಿನಾಶ್ ಶೆಟ್ಟಿ, ಅನಿಲ್ ಕುಮಾರ್, ಯೋಗೀಶ್ ಶೆಟ್ಟಿ ಬಾಲಾಜಿ, ವೀಣಾ ಶೆಟ್ಟಿ, ದಿವಾಕರ್ ಶೆಟ್ಟಿ, ಹರೀಶ್ ನಾಯಕ್ ಉಪಸ್ಥಿತರಿದ್ದರು.

ಹೊರಕಾಣಿಕೆಯಲ್ಲಿ ಸಲ್ಲಿಕೆಯಾಗುವ ವಸ್ತುಗಳಿಂದಲೇ ಒಂಬತ್ತು ದಿನವೂ ಅನ್ನದಾನ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ಫೆ.25ರಿಂದ ಮಾ.5ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಗಳು ನೆರವೇರಲಿದ್ದು. ದೃಢಕಲಶೋತ್ಸವದವರೆಗಿನ 48 ದಿನ ನಿತ್ಯೋತ್ಸವ ನಡೆಯಲಿದೆ. ಈ ದಿನಗಳಲ್ಲಿ ನಿತ್ಯವೂ ಚಂಡಿಕಾಯಾಗ ನೆರವೇರಲಿದೆ. ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಾದೇವಿ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. -ಕೆ.ವಾಸುದೇವ ಶೆಟ್ಟಿ, ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ https://www.vijayavani.net/goa-cm-visits-basrur-mutt-2 https://www.vijayavani.net/kota-mescom-public-relations-meeting-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net