ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆಯಿಂದ ಚಾಮುಂಡೇಶ್ವರಿ ದೇವಿಗೆ ಪೂಜಾ ಸಾಮಗ್ರಿ ಅರ್ಪಣೆ

Offering pooja material to Goddess Chamundeshwari by Tamil Nadu Religious Endowment Department
Published on

ಮೈಸೂರು: ತಮಿಳುನಾಡು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಪರವಾಗಿ ಬಣ್ಣಾರಿ ಅಮ್ಮನ್ ದೇವಾಲಯ ವತಿಯಿಂದ ಮಂಗಳವಾರ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಗೆ ರೇಷ್ಮೆ ಸೀರೆ, ಹಣ್ಣು, ಅರಿಶಿನ, ಕುಂಕುಮ ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಅರ್ಪಿಸಲಾಯಿತು.

ತಮಿಳುನಾಡು ಮುಖ್ಯಮಂತ್ರಿ ಆದೇಶದ ಮೇರೆಗೆ ಪೂಜಾ ಸಾಮಗ್ರಿಗಳನ್ನು ಅರ್ಪಿಸಲಾಯಿತು. ನವೆಂಬರ್ ತಿಂಗಳಿನಲ್ಲಿ ಚಾಮುಂಡೇಶ್ವರಿ ದೇವಾಲಯದ ವತಿಯಿಂದ ಸತ್ಯಮಂಗಲ ತಾಲೂಕಿನಲ್ಲಿರುವ ಬಣ್ಣಾರಿ ಅಮ್ಮನ ದೇವಸ್ಥಾನಕ್ಕೆ ಚಾಮುಂಡಿ ಬೆಟ್ಟದ ಆಡಳಿತ ಮಂಡಳಿಯು ಸೀರೆ, ಹಣ್ಣು ಹಂಪಲುಗಳು ಅಭಿಷೇಕದ ದ್ರವ್ಯಗಳನ್ನು ನೀಡಲಿದ್ದಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪ್ರತಿತಿ. ಈ ಸಂದರ್ಭ ತಮಿಳುನಾಡಿನ ಪ್ರತಿನಿಧಿಗಳಾದ ಪರಮ ಜ್ಯೋತಿ, ಶೇಖರ್, ಪಾರ್ಥಿಬನ್, ಶಿಖಾಮಣಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net