ಕುಮಾರಧಾರ ನದಿಗೆ ಪೂಜನಾ ಸಮರ್ಪಣೆ

New Project (45)
Published on

ಸುಬ್ರಹ್ಮಣ್ಯ: ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ನದಿ ಪೂಜನ ಕಾರ್ಯಕ್ರಮ ನಡೆಯಿತು. ಕುಮಾರಧಾರ ನದಿಗೆ ಪೂಜೆ ಸಮರ್ಪಣೆ ಮಾಡಲಾಯಿತು.

ಶೇಷಪ್ಪ ಅಜಿಲ ಕೋಟೆಬೈಲು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಭಜನಾ ತಂಡಗಳಿಂದ ಭಜನೆ ನಡೆಯಿತು. ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ನದಿ ಪೂಜನದ ಮಹತ್ವ ಪರಿಸರ ಸಂರಕ್ಷಣೆ ಮೌಲ್ಯ ಮತ್ತು ನಮ್ಮ ಮೇಲಿರುವ ಹೊಣೆ ಬಗ್ಗೆ ವಿವರಿಸಿದರು.

ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಸದಸ್ಯ ಗಿರೀಶ್ ಆಚಾರ್ಯ ಪೈಲಾಜೆ, ವೆಂಕಟೇಶ್ ಎಚ್.ಎಲ್, ಪ್ರಮುಖರಾದ ಡಾ.ಶಿವಕುಮಾರ್ ಹೊಸೋಳಿಕೆ, ಅಶೋಕ್‌ಕುಮಾರ್ ಮೂಲೆಮಜಲು, ಅಚ್ಯುತ್ತ ಗೌಡ, ಡಾ.ರವಿ ಕಕ್ಕೆಪದವು ಉಪಸ್ಥಿತರಿದ್ದರು. ಮಲೆನಾಡು ಹಿತರಕ್ಷಣೆ ಪ್ರಮುಖ ಜಯಪ್ರಕಾಶ್ ಕೂಜುಗೋಡು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net