ಗಣೇಶ ವಿರ್ಸಜನೆ ಬಾವಿಗೆ ಬಾಗಿನ ಅರ್ಪಣೆ

h25-ganesh pond
Published on

ಹುಬ್ಬಳ್ಳಿ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಇಲ್ಲಿಯ ಹೊಸೂರಿನ ಗಣೇಶ ವಿಸರ್ಜನಾ ಬಾವಿಗೆ ಸೋಮವಾರ ಬಾಗಿನ ಸಮರ್ಪಿಸಲಾಯಿತು.

ಬಾಗಿನ ಅರ್ಪಣಾ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ ಡಾ. ಚಂದ್ರಪ್ರಭಾ ಪೂಜಾರ ಮಾತನಾಡಿ, ಹುಬ್ಬಳ್ಳಿಯ ಶ್ರೀ ಗಣೇಶೋತ್ಸವ ರಾಜ್ಯಾದ್ಯಂತ ಹೆಸರು ಮಾಡಿದೆ. ತಿಂಗಳವರೆಗೆ ಈ ಸಂಭ್ರಮ ಮನೆ ಮಾಡಿರುತ್ತದೆ. ನಮ್ಮ ಸಂಸ್ಕೃತಿ, ಧಾರ್ಮಿಕ ಮನೋಭಾವಗಳನ್ನು ಒಗ್ಗೂಡಿಸಿಡುತ್ತದೆ ಎಂದರು.

ಉದ್ಯಮಿ ವಿಜಯಲಕ್ಷ್ಮೀ ಏಕಬೋಟೆ ಮಾತನಾಡಿ, ಭಾವೈಕ್ಯತೆಗೆ ಇನ್ನೊಂದು ಹೆಸರು ಹುಬ್ಬಳ್ಳಿಯ ಗಣೇಶೋತ್ಸವ. ಈ ಪವಿತ್ರವಾದ ಗಣೇಶೋತ್ಸವದಲ್ಲಿ ಮಹಿಳೆಯರಿಗೂ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿರುವುದು ಸಮಾನತೆಗೆ ಸಾಕ್ಷಿಯಾಗಿದೆ ಎಂದರು.

ಉದ್ಯಮಿ ವಿದ್ಯಾ ಪಾಟೀಲ, ಸುಮಾ ಶೀಲವಂತರ ಮಾತನಾಡಿದರು.

ಹೊಸೂರಿನ ಗಣೇಶ ವಿಸರ್ಜನೆ ಬಾವಿಯನ್ನು ನಾಗೇಶ ಹಂಚಿನಮನಿ, ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಗಣೇಶ ವಿಸರ್ಜನೆ ಬಾವಿಯನ್ನು ಹನುಮಂತಪ್ಪ ಅವರು ಸಿದ್ಧಗೊಳಿಸಿದ್ದಕ್ಕಾಗಿ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನೀಲಕಂಠ ಹಿರೇಮಠ, ಸಂತೋಷ ಬಡಿಗೇರ, ಗಾಯತ್ರಿ ನೆಲ್ಲಿಕೊಪ್ಪ, ಟಿ.ಎಚ್. ಬಂಡಿ ಅವರನ್ನು ಸನ್ಮಾನಿಸಲಾಯಿತು.

ರೂಪಾ ಅಂಗಡಿ, ರತ್ನಾ ಬಸಾಪುರ, ಅಕ್ಕಮ್ಮ ಕಂಬಳಿ, ಪಾರ್ವತಿ ಹಿರೇಮಠ, ಶೋಭಾ ಕಂಪ್ಲಿ, ಸಂಗೀತಾ ದೇವದಾಸ, ಅಕ್ಕಮ್ಮ ಅಂದೇಲಿಮಠ, ಸಂಗೀತಾ ಜಡಿ, ಸುಜಾತ ರೋಣದ, ಶ್ರೀನಿಧಿ ದೇಶಪಾಂಡೆ, ಜ್ಯೋತಿ ಸಂಗನಾಳ, ಅಶ್ವಿನಿ ಬುರ್ಲಬಡ್ಡಿ, ಸರಸ್ವತಿ ಮೆಹರವಾಡೆ, ಮಧುಮತಿ ಪಾಟೀಲ, ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಸಿದ್ದಣ್ಣ ಅಂಗಡಿ, ಗುರುನಾಥ ಪತ್ತಾರ, ಎಂ.ಎಂ. ಡಂಬಳ, ಅನಿಲ ಬೇವಿನಕಟ್ಟಿ, ರಾಜಶೇಖರ ಕರಕಣ್ಣವರ, ಮಹೇಶ ಶೇಟ್, ಮಹೇಶ ಪತ್ತಾರ, ಸಿ.ಬಿ. ನವಲಗುಂದ, ಶ್ರೀನಿವಾಸ ಏಕಬೋಟೆ, ಸಚಿನ ಪಾಟೀಲ, ರೋಹನ ಗೋಂದಕರ, ಶ್ರೀಧರ ಕಂಪ್ಲಿ ಇತರರು ಇದ್ದರು. ಅನಿತಾ ಜಡಿ, ಚಂದ್ರಶೇಖರ ಗಾಣಿಗೇರ ಸಂಗೀತ ಸೇವೆ ನೀಡಿದರು.

ಸಂಗೀತಾ ಇಜಾರದ ಸ್ವಾಗತಿಸಿದರು. ಸಾಧನಾ ಪೂಜಾರ ನಿರೂಪಿಸಿದರು. ರೇಖಾ ಆಪ್ಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net