

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಹೊರವಲಯದ ಮೂಗ್ತಿಹಳ್ಳಿ ದೊಡ್ಡಕೆರೆ ಕೋಡಿ ಬಿದ್ದಿದ್ದು, ಮೂಗ್ತಿಹಳ್ಳಿ ಗ್ರಾಮಪಂಚಾಯತಿಯಿAದ ಕೆರೆಗೆ ಬಾಗೀನ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಉಮೇಶ್ ಶೆಟ್ಟಿ, ಗ್ರಾಪಂನ ಎಲ್ಲ ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿಯೊAದಿಗೆ ಕೆರೆಗೆ ಬಾಗೀನ ಅರ್ಪಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇತ್ತು. ಇದೀಗ ಮಳೆಯಿಂದ ಕೆರೆ ತುಂಬಿರುವುದು ಎಲ್ಲ ಗ್ರಾಮಸ್ಥರಿಗೆ ಸಂತಸ ತಂದಿದೆ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ಈ ಕೆರೆ ಅಭಿವೃದ್ಧಿಗೆ ೧.೮೦ ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಕಳಪೆಯಿಂದ ನಡೆಯುತ್ತಿದೆ. ಈ ಸಂಬAಧ ಇಂಜಿನಿಯರ್‌ಗೆ ದೂರವಾಣಿ ಮೂಲಕ ಹಾಗೂ ಖುದ್ದಾಗಿ ದೂರು ಸಲ್ಲಿಸಿದ್ದು, ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿz್ದೆÃನೆ. ಈ ಬಗ್ಗೆ ಸ್ಥಳೀಯ ಶಾಸಕರು ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಮೂಗ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಗಾಲವಾಗಿರುವುದರಿಂದ ಕೆಲವರಲ್ಲಿ ಜ್ವರ ಇದೆ. ಡೆಂಘೆ ಎಲ್ಲೆಡೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಫಾಗಿಂಗ್, ಪೌಡರ್ ಸಿಂಪರಣೆ ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ ಬಿದ್ದ ಮಳೆ ಪರಿಣಾಮ ಮೂಗ್ತಿಹಳ್ಳಿ ದುಂಗೆರೆ, ಮತ್ತಾವರ ಗ್ರಾಮದಲ್ಲಿ ಮನೆಗಳು ಬಿದ್ದಿರುವುದಾಗಿ ವರದಿಯಾಗಿದೆ. ಪರಿಶೀಲಿಸಲು ಪಿಡಿಒ ಸಹಿತ ಸದಸ್ಯರೊಂದಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ಅಂಬಿಕಾ ಪ್ರಕಾಶ್ ಮಾತನಾಡಿ, ಕೆರೆ ತುಂಬಿರುವುದರಿAದ ಮುಂದೆ ಬರಗಾಲ ಬಾರದಂತೆ ಪ್ರಾರ್ಥಿಸಿ ಕೆರೆಗೆ ಬಾಗಿನ ಬಿಟ್ಟಿz್ದÉÃವೆ. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಗ್ರಾಮ ಪಂಚಾಯಿತಿಯಿAದ ಸರ್ವೆ ಮಾಡಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಅಂಬಿಕಾ ಮಧುಸೂದನ್, ಗಿರೀಶ್, ಪದ್ಮಾ ರಾಜಶೇಖರ್, ಪ್ರಭಾಕರ್, ಮಂಜುನಾಥ್ ಎಂ.ಎಸ್, ಪದ್ಮಾ, ಸವಿತ, ನವೀನ್‌ಕುಮಾರಿ, ಕಮಲಾಕ್ಷಿ, ಸಂದೀಪ್, ಸತೀಶ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಲಕ್ಷö್ಮಣ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಿಕ್ರಾಂತ್, ಪಿಡಿಒ ರತ್ನಾಕರ್ ಉಪಸ್ಥಿತರಿದ್ದರು.