

ಹುಬ್ಬಳ್ಳಿ: ನಗರದ ಬೆಂಗೇರಿ ಬಡಾವಣೆ ಚೇತನ ಕಾಲನಿಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಜೀಣೋರ್ದ್ಧಾರ ಟ್ರಸ್ಟ್‌ನ 21ನೇ ವಾರ್ಷಿಕೋತ್ಸವ ನಿಮಿತ್ತ ಫೆ. 2ರಂದು ಬೆಳಗ್ಗೆ 7ರಿಂದ 8ರವರೆಗೆ ಅಷ್ಟದ್ರವ್ಯ ಅಭಿಷೇಕದ ನಂತರ ನಂದಿ, ಈಶ್ವರ, ಗಣೇಶ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ ನಡೆಯಲಿದೆ.
ಬೆಳಗ್ಗೆ 11ಕ್ಕೆ ಸುಳ್ಳ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗಣಹೋಮದ ಪೂರ್ಣಾಹುತಿ, ಮಧ್ಯಾಹ್ನ 12ಕ್ಕೆ ತೊಟ್ಟಿಲೋತ್ಸವ, ನಂತರ ಮಹಾಮಂಗಳಾರತಿ, ಶ್ರೀಗಳ ಪಾದಪೂಜೆ ನಡೆಯಲಿದೆ. ನಂತರ ಶ್ರೀಗಳ ಸಾನ್ನಿಧ್ಯದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ.
ಅತಿಥಿಯಾಗಿ ಶಾಸಕ ಮಹೇಶ ಟೆಂಗಿನಕಾಯಿ ಆಗಮಿಸುವರು. ನಗರಸಭೆ ಸದಸ್ಯರಾದ ಮಹದೇವಪ್ಪ ನರಗುಂದ, ಬೀರಪ್ಪ ಖಂಡೇಕರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 1.30ಕ್ಕೆ ಪ್ರಸಾದ ವಿತರಣೆ ನೆರವೇರಲಿದೆ. ಸಂಜೆ 7ಕ್ಕೆ ಜಾನಪದ ಕಲಾವಿದ ಬಸವರಾಜ ಕೆಂಧೂಳಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಯಲಬುರ್ಗಿ, ಕಾರ್ಯದರ್ಶಿ ಮೇರಾಜ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.