ಶ್ರೀ ಬ್ರಹ್ಮಾನಂದ ಶ್ರೀಗಳಿಗೆ ಪ್ರಸಾದ ಸಮರ್ಪಣೆ

gkn SWAMIJI
Published on

ಗೋಕರ್ಣ: ಕೋನಳ್ಳಿಯಲ್ಲಿ ಚಾತುರ್ವಸ್ಯ ವ್ರತನಿಷ್ಠರಾದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪರಮಪೂಜ್ಯಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿ ಅವರನ್ನು ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಲದ ಅಧ್ಯಕ್ಷ, ಶ್ರೀಮಹಾಬಲೇಶ್ವರ ಮಂದಿರದ ಪ್ರಧಾನ ಅರ್ಚಕ ರಾಜಗೋಪಾಲ ಅಡಿ ಮತ್ತಿತರರು ಇತ್ತೀಚೆಗೆ ಭೇಟಿಯಾಗಿ ಆತ್ಮಲಿಂಗರೂಪಿ ಶ್ರೀಮಹಾಬಲೇಶ್ವರ ದೇವರ ವಿಶೇಷ ಪೂಜಾ ಪ್ರಸಾದವನ್ನು ಸಮರ್ಪಿಸಿ ಆಶೀರ್ವಾದ ಪಡೆದರು.

ಈ ವೇಳೆ ಅವರ ಜೊತೆಯಲ್ಲಿ ಶ್ರೀಮಹಾಬಲೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ನಿರ್ದೇಶಕರಾದ ತೇಜಸ್ವಿ ಪಿ.ನಾಯ್ಕ ಬೇಲೆಕಾನು, ಮಂಜುನಾಥ ಎನ್. ನಾಯಕ ದೇವರಬಾವಿ, ರೋಹಿತ ತಿಪ್ಪಣ್ಣ ನಾಯಕ, ಜಿಲ್ಲಾ ಗುನಗ ಸಮಾಜದ ಯುವ ವಾಹಿನಿ ಸಂಚಾಲಕ ಪವನ ಗುನಗ, ಉದ್ಯಮಿ ದತ್ತಮೂರ್ತಿ ನಾಯ್ಕ ಬೇಲೆಕಾನು, ಪಾಂಡುರಂಗ ನಾಯ್ಕ, ಲಕ್ಷ್ಮಣ ನಾಯ್ಕ ಇದ್ದರು. ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಸರ್ವರನ್ನು ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net