

ದೇವನಹಳ್ಳಿ : ಪಟ್ಟಣದ ಶ್ರೀ ಚೌಡೇಶ್ವರಿ ಅಮ್ಮನ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ದೇವಿಗೆ ಅರಿಶಿಣ&ಕುಂಕುಮ ಸೇರಿ ಕವಡೆ ಅಲಂಕಾರ ಮಾಡಲಾಯಿತು. ಸಂಪ್ರದಾಯದಂತೆ ಕಂಕಣಧಾರಿಗಳಾದ ದೇವಾಂಗ ಜನಾಂಗದ ಭಕ್ತರು ಮೈಗೆ ಅರಿಶಿಣ ಬಳಿದುಕೊಂಡು ಕತ್ತಿಯಿಂದ ಎದೆಗೆ ಹೊಡೆದುಕೊಂಡು ದೇವಿಯ ಸ್ತೋತ್ರ ಪಠಿಸು ಮೂಲಕ ದೇಹದಂಡನೆ ಮಾಡಿ ಹರಕೆ ತೀರಿಸಿದರು. ನಿವೃತ್ತ ತಹಸೀಲ್ದಾರ್ ಪಿ.ಗಂಗಾಧರ್, ನಿವೃತ್ತ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಬಯಪ ಮಾಜಿ ಹಾಗೂ ದೇವಾಲಯ ಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್, ಪುರಸಭೆ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ , ದೇವಾಲಯ ಟ್ರಸ್ಟಿ ಎನ್.ಮುನಿರಾಜ್, ಲಯನ್ಸ್ ಮಾಜಿ ಅಧ್ಯಕ್ಷ ವೈ.ಸಿ.ಕೃಪಾಕರ್ ವಿಜಯಕುಮಾರ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ದೇಸೂ ನಾಗರಾಜ್, ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮಯ್ಯ ಇತರರು ಇದ್ದರು.