ಮೇಲ್ಬೇಟು ಗರಡಿಗೆ ಹೊರೆಕಾಣಿಕೆ ಸಮರ್ಪಣೆ

hore
Published on

ಹೆಬ್ರಿ: ಚಾರ ಮೇಲ್ಬೇಟ್ಟು ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿಯ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಹೆಬ್ರಿಯಿಂದ ಹೊರೆಕಾಣಿಕೆ ಮೆರವಣಿಗೆ ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿತು.

ಕೆರೆಬೆಟ್ಟು ಚಾರ, ಕಳ್ತೂರು ಗ್ರಾಮದ ವಿವಿಧ ಭಾಗಳಿಂದ ಮತ್ತು ಇತರ ಕಡೆಗಳಿಂದ ಭಕ್ತರು ತರ್ಕಾರಿ, ಅಕ್ಕಿ, ಬೇಳೆ ಸಹಿತ ಅಗತ್ಯ ವಸ್ತುಗಳನ್ನು ಸಮರ್ಪಿಸಿದರು. ಜತೆಗೆ ದೈವದ ಬಿಂಬಗಳ ಮೆರವಣಿಗೆ ಕೂಡ ಕ್ಷೇತ್ರಕ್ಕೆ ಆಗಮಿಸಿತು. ನೂರಾರು ಮಂದಿ ಭಕ್ತರು ಮೆರವಣಿಗೆಗಳಲ್ಲಿ ಭಾಗವಹಿಸಿದರು.

ಗರಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಬಿ.ಹರ್ಷ ಶೆಟ್ಟಿ ಹುತ್ತುರ್ಕೆ, ಅನುವಂಶಿಕ ಆಡಳಿತ ಮೋಕ್ತೇಸರ ಸುರೇಶ ಹೆಗ್ಡೆ ತಾರಾಳಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಸಮಾಜ ಸೇವಕ ಸುಗ್ಗಿ ಸುಧಾಕರ ಶೆಟ್ಟಿ, ಪುರೋಹಿತ ಸುಬ್ರಹ್ಮಣ್ಯ ಹೇರಳೆ, ಗರಡಿ ಪೂಜಾರಿ ವರ್ಗದವರಾದ ಲಕ್ಷ್ಮಣ ಪೂಜಾರಿ, ಸುಧಾಕರ ಪೂಜಾರಿ, ಪ್ರಚಾರ ಸಮಿತಿಯ ಅಧ್ಯಕ್ಷ ಮಿಥುನ್ ಶೆಟ್ಟಿ ಚಾರ, ಜೀರ್ಣೋದ್ಧಾರ ಸಮಿತಿ, ಆಡಳಿತ ಮಂಡಳಿ, ಅನುವಂಶಿಕ ಒಂಬತ್ತು ಮನೆಯವರು, ವಾರ್ಡ್ ಸಮಿತಿಯ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net