ಮೂಢನಂಬಿಕೆ ಆಚರಣೆ ವಿರೋಧಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಅಭಿಮತ

the father of Hadapada
ಹನುಮಸಾಗರ ಗ್ರಾಪಂನಲ್ಲಿ ನಿಜಸುಖಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಸದಸ್ಯರಾದ ಮಂಜುನಾಥ ಹುಲ್ಲೂರ, ರಿಯಾಜ್ ಖಾಜಿ, ಕರ ವಸೂಲಿಗಾರ ಮಹಾಂತಯ್ಯ ಕೋಮಾರಿ, ಹಡಪದ ಸಮುದಾಯದ ಸ್ಥಳೀಯ ಅಧ್ಯಕ್ಷ ಹನಮಂತ ಹಡಪದ ಹಾಗೂ ಸಮುದಾಯದ ಮುಖಂಡರಿದ್ದರು.
Published on

ಹನುಮಸಾಗರ: ಮಾಡುವ ಕಾಯಕದಲ್ಲಿ ಪ್ರತಿಯೊಬ್ಬರೂ ಹಡಪದ ಅಪ್ಪಣ್ಣರಂತೆ ನಿಷ್ಠೆ ಹೊಂದಿರಬೇಕು ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.

ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಗುರುವಾರ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಹಡಪದ ಅಪ್ಪಣ್ಣ ಅವರು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಮೂಢನಂಬಿಕೆ ಆಚರಣೆ ವಿರೋಧಿಸಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ್ದಾರೆ. ಬಸವಣ್ಣನವರ ಸಮಕಾಲೀನರಾದ ಅವರು, 250ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದರು.

ಗ್ರಾಪಂ ಸದಸ್ಯರಾದ ಮಂಜುನಾಥ ಹುಲ್ಲೂರ, ರಿಯಾಜ್ ಖಾಜಿ, ಕರ ವಸೂಲಿಗಾರ ಮಹಾಂತಯ್ಯ ಕೋಮಾರಿ, ಹಡಪದ ಸಮುದಾಯದ ಸ್ಥಳೀಯ ಅಧ್ಯಕ್ಷ ಹನಮಂತ ಹಡಪದ, ಪ್ರಮುಖರಾದ ಸಂತೋಷ ಹಡಪದ, ಹನಮಂತ ಹಡಪದ, ಶರಣಪ್ಪ ಹಡಪದ, ಬಸವರಾಜ ಹಡಪದ, ಕುಡ್ಲೆಪ್ಪ ಹಡಪದ, ನಾಗರಾಜ ಹಡಪದ, ಸಂಗಪ್ಪ ಹಡಪದ, ಈರಪ್ಪ ಹಡಪದ, ಅಶೋಕ ಹಡಪದ, ಮಹಾಂತೇಶ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net