ಸಾವಿರಾರು ಜನರಿಗೆ ಅನ್ನ ಸಂತರ್ಪಣೆ

HUN-FEB-17-1(RATNAPURI JATRE-ANNASANTARPANE)
Published on

ಹುಣಸೂರು : ತಾಲೂಕಿನ ರತ್ನಪುರಿ ಶ್ರೀ ಆಂಜನೇಯಸ್ವಾಮಿ ಅವರ 60ನೇ ವರ್ಷದ ಮಹಾಭಿಷೇಕ ಮತ್ತು ಪಲ್ಲಕ್ಕಿ ಉತ್ಸವದ ಎರಡನೇ ದಿನವಾದ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು.


ಶನಿವಾರ ಬೆಳಗಿನ ವಿಶೇಷ ಪೂಜಾ ಕೈಂಕರ್ಯಗಳು ನಡೆದ ನಂತರ ಮಧ್ಯಾಹ್ನ 12 ಗಂಟೆಗೆ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಅನ್ನಸಂತರ್ಪಣೆಗೆ ಉದ್ಯಮಿ ಕೃಷ್ಣ ಮತ್ತವರ ತಂಡ ಚಾಲನೆ ನೀಡಿತು. ಮಧ್ಯಾಹ್ನ 3 ಗಂಟೆಯವರೆಗೆ ಸಾಂಗೋಪವಾಗಿ ಅನ್ನಸಂತರ್ಪಣೆ ನಡೆದು, ನಾಲ್ಕು ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಪ್ರಸಾದ ಸ್ವೀಕರಿಸಿದರು.


ಉದ್ಯಮಿ ಕೃಷ್ಣ ಮಾತನಾಡಿ, ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ವಿವಿಧ ಗ್ರಾಮಗಳ ಮುಖಂಡರು, ಭಕ್ತರ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಭಾವೈಕ್ಯತೆಯನ್ನು ಸಾರುವ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದೇ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಎಲ್ಲ ಜನರು ಜಾತಿ, ಮತ, ಧರ್ಮ, ಪಂಥಗಳನ್ನು ಮರೆತು ಒಂದಾಗಿ ಉತ್ಸವವನ್ನು ಆಚರಿಸಿ ರಾಜ್ಯಕ್ಕೆ ಇಡೀ ಮಾದರಿಯಾಗಿದ್ದೇವೆ ಎಂದು ಸಂಭ್ರಮಿಸಿದರು.


ಜಾತ್ರಾ ಸಮಿತಿ ಅಧ್ಯಕ್ಷ ಆರ್.ಪ್ರಭಾಕರ್, ಜಿಪಂ ಮಾಜಿ ಸದಸ್ಯ ಎಂ.ಬಿ.ಸುರೇಂದ್ರ, ಮುಖಂಡರಾದ ಸತೀಶ್ ಪಾಪಣ್ಣ, ಕರ್ಣ, ಹರೀಶ್ ಇತರರು ಹಾಜರಿದ್ದರು. ಇದೇ ವೇಳೆ ವಿಜಯವಾಣಿ ಪತ್ರಿಕೆಯಲ್ಲಿ ಜಾತ್ರೆ ಕುರಿತಂತೆ ಪ್ರಕಟಗೊಂಡ ವಿಶೇಷ ವರದಿಯನ್ನು ಭಕ್ತರು ಪ್ರದರ್ಶಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net