ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ : ಸಮಾಜ ಬಾಂಧವರಿಂದ ಬೆಳ್ತಂಗಡಿ ಠಾಣೆಗೆ ದೂರು

New Project (2)
Published on

ಬೆಳ್ತಂಗಡಿ: ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಲ್ಲದೆ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ರಾಜು ಶೆಟ್ಟಿ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಜಿರೆ ಓಡಲ ನಿವಾಸಿ ಅಜಯ್ ಕುಮಾರ್ ಪಿ.ಕೆ ಎಂಬುವರು ಬೆಳ್ತಂಗಡಿ ಪೊಲೀಸರಿಗೆ ಸೋಮವಾರ ದೂರು ನೀಡಿದರು.

ಏ.7ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಆಡಿಯೋ ಸಂಭಾಷಣೆ ತುಣುಕು ಹರಿದಾಡುತ್ತಿದ್ದು, ಉಜಿರೆ ಕುಂಜರ್ಪ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಬಡಗಕಾರಂದೂರು ರಾಜು ಶೆಟ್ಟಿ ಸಂಭಾಷಣೆ ನಡೆಸಿದ್ದಾರೆ. ಅದರಲ್ಲಿ ಜೈನರನ್ನು ಹಾಗೂ ಜೈನ ಧರ್ಮದ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದು, ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅಲ್ಲದೆ ಜೈನ ಧರ್ಮದ ಬಗ್ಗೆ ನಿಂದಿಸಿ ಸಮಾಜದ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೈನರ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿ ಆಘಾತ ಉಂಟು ಮಾಡುವ ದ್ವೇಷ ಭಾವನೆಯಿಂದ ಕೃತ್ಯ ಮಾಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ದೂರು ನೀಡುವ ಸಂದರ್ಭದಲ್ಲಿ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net