ಹಾಫ್ ಮ್ಯಾರಥಾನ್ ಬಿಬ್ ವಿತರಣೆ 16ರಂದು

h11-marathon logo
Published on

ಹುಬ್ಬಳ್ಳಿ: ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಸಹಯೋಗದಲ್ಲಿ ಫಿಟ್‌ನೆಸ್ ಕ್ಲಬ್ ವತಿಯಿಂದ 10ನೇ ಆವೃತ್ತಿಯ ಹುಬ್ಬಳ್ಳಿ ಹಾಫ್ ಮ್ಯಾರಾಥಾನ್ ನ. 17ರಂದು ಏರ್ಪಾಟಾಗಿದೆ. ಕಳೆದ ಬಾರಿ ಸುಮಾರು 5 ಸಾವಿರ ಜನರು ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಬಾರಿ 7.30 ಲಕ್ಷ ರೂ.ವರೆಗೆ ನಗದು ಬಹುಮಾನ ಕೊಡಲು ನಿರ್ಧರಿಸಲಾಗಿದೆ. ಬಿಬ್ ಟಿಶರ್ಟ್ ನ. 16ರಂದು ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ಗೋಕುಲ ರಸ್ತೆಯ ಡೆಕಥ್ಲಾನ್‌ನಲ್ಲಿ ವಿತರಿಸಲಾಗುವುದು. ನ. 16ರಂದು ಸ್ಥಳದಲ್ಲಿಯೇ ನೋಂದಣಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net