ಸಂವಿಧಾನದ ಆಶಯ ಎತ್ತಿ ಹಿಡಿಯಲಿ

28100
Published on

ಬೈಲಹೊಂಗಲ: ಸಂವಿಧಾನದ ಸಾರವನ್ನು ಯುವಜನತೆಗೆ ತಲುಪಿಸಲು ವಿಶೇಷ ಉಪನ್ಯಾಸಗಳು ಮತ್ತು ಚರ್ಚಾಸಭೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾನೀಯ ಎಂದು ಇಂಚಲ ಶಿವಯೋಗೀಶ್ವರ ಶಿಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಇಂಚಲದ ಆಯುರ್ವೇದ ಕಾಲೇಜು ಸಭಾಭವನದಲ್ಲಿ ಅದಿವ್ಯಕ್ತ ಪರಿಷತ್​, ಬೆಲಹೊಂಗಲ ಬಾರ್​ ಅಸೋಸಿಯೇಷನ್​ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಬಾಸಾಹೇಬ್​ ಅಂಬೇಡ್ಕರ್​ ಅವರ ಕನಸುಗಳು ಮತ್ತು ಭಾರತೀಯ ಸಂವಿಧಾನದಲ್ಲಿ ಅಡಗಿರುವ ಸಮಾನತೆಯ ಆಶಯ ಎತ್ತಿಹಿಡಿಯಬೇಕು ಎಂದರು.

ವಕೀಲ ಎ್​.ಎಸ್​. ಸಿದ್ದನಗೌಡರ ಮಾತನಾಡಿ, ಸಂವಿಧಾನ ಪ್ರಜಾಪ್ರಭುತ್ವವನ್ನು ಪ್ರಬಲಗೊಳಿಸುವ ಕಂಕಣ ಎಂದರು.

ವಕೀಲ ಎಸ್​.ಎಸ್​.ಆಲದಕಟ್ಟಿ ಮಾತನಾಡಿದರು. ವಕೀಲರ ಸಂದ ಅಧ್ಯ ಎಂ.ಆರ್​. ಮೆಳವೆಂಕಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಬೋಧಿಸಿದರು. ಡಾ.ವಿನಯ ಮೋಹನ, ಉಪ ಪ್ರಾಚಾರ್ಯ ಡಾ.ಗಂಗಾಧರ ಹಾದಿಮನಿ, ವಕೀಲರಾದ ಎಸ್​.ವಿ. ಸಿದ್ದಮನಿ, ಎಸ್​.ವೈ. ಪಾಟೀಲ, ಅದಶ್ಯ ಸಿದ್ರಾಮನಿ, ಸಿ.ಎಸ್​. ಚಿಕ್ಕನಗೌಡರ, ಎಂ.ಎಂ. ಅಬ್ಬಾಯಿ, ಸಿದ್ದಲಿಂಗ ಬೊಳಶೆಟ್ಟಿ, ಉಮಾ ಬುಲಾಕೆ, ಜಯಶ್ರೀ ಚಿಕ್ಕಮಠ, ಸುಜಾತಾ ಆಲದಕಟ್ಟಿ, ಶಾಂತಕ್ಕ ಸಿದ್ರಾಮಣ್ಣವರ, ಡಾ.ಮಹೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net