ಮಳಿಗೆಗಳ ಬಾಡಿಗೆ ವಕ್ಫ್ ಮಂಡಳಿಗೆ ಸೇರಲಿ

1 KMP 02
ವಾಣಿಜ್ಯ ಮಳಿಗೆಗಳ ಬಾಡಿಗೆ ವಕ್ಫ್ ಮಂಡಳಿಗೆ ಸೇರಬೇಕೆಂದು ಆಗ್ರಹಿಸಿ ಕಂಪ್ಲಿ ಖಬರಸ್ಥಾನ್(ಸುನ್ನಿ)ಸಮಿತಿ ಅಧ್ಯಕ್ಷ ಅಬ್ದುಲ್ ಫಾರೂಕ್‌ಗೆ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ನಜೀರ್, ಬಾಷಾ, ಬಿ.ಮೌಲಾಹುಸೇನ್, ಕೆ.ಮಸ್ತಾನ್, ರಿಯಾಜ್, ರೆಹಮತುಲ್ಲ, ಎಸ್.ಆರ್.ಬಾಷಾ, ಯೂಸೂಫ್, ಆಸೀಫ್ ಗೆಜ್ಜೆಳ್ಳಿ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಖಬರಸ್ಥಾನ್(ಸುನ್ನಿ)ಸಮಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ವಕ್ಫ್ ಮಂಡಳಿ ಸುಪರ್ದಿಗೆ ವಹಿಸಬೇಕೆಂದು ಒತ್ತಾಯಿಸಿ, ಖಬರಸ್ಥಾನ್(ಸುನ್ನಿ)ಸಮಿತಿಯ ಕೆಲ ಸದಸ್ಯರು ಸಮಿತಿ ಅಧ್ಯಕ್ಷ ಅಬ್ದುಲ್ ಫಾರುಕ್‌ಗೆ ಭಾನುವಾರ ಮನವಿ ಸಲ್ಲಿಸಿದರು.

ಸಮಿತಿ ನಿರ್ದೇಶಕ ಬಿ.ರಸೂಲ್ ಮಾತನಾಡಿ, ಸಮಿತಿ ವ್ಯಾಪ್ತಿಗೊಳಪಟ್ಟ ಸರ್ವೇ ನಂ.1315ರ ವಿಸ್ತೀರ್ಣ 8.38ಎಕರೆ ಪ್ರದೇಶದಲ್ಲಿ 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿದ್ದು, ಅನೇಕ ವರ್ಷಗಳಾದರೂ ಈತನಕ ಸದರಿ ಮಳಿಗೆಗಳನ್ನು ವಕ್ಫ್ ಮಂಡಳಿಗೆ ಸೇರಿಸಿಲ್ಲ. ಸಮಿತಿಯವರೇ ಬಾಡಿಗೆ ಹಣ ವಸೂಲು ಮಾಡುತ್ತಿದ್ದಾರೆ. 2024ರ ಆ.25ರಂದು ಸಮಿತಿಯ ಚುನಾವಣೆಯಲ್ಲಿ 11ಜನ ನಿರ್ದೇಶಕರು ಆಯ್ಕೆಗೊಂಡು ವರ್ಷ ಕಳೆದರೂ ಬಾಡಿಗೆ ಹಣವನ್ನು ಬ್ಯಾಂಕ್ ಖಾತೆ ತೆರೆದು ಜಮಾ ಮಾಡಿ ವಕ್ಫ್ ಸುಪರ್ದಿಗೆ ವಹಿಸಿಲ್ಲ ಎಂದು ದೂರಿದರು.

ಬಾಡಿಗೆ ಹಣವನ್ನು ಸಭೆ ನಡೆಸದೆ ಖರ್ಚು ಮಾಡುತ್ತಿರುವುದು ಸರಿಯಲ್ಲ. ಇದರಿಂದ ವಕ್ಫ್‌ಗೆ ಆರ್ಥಿಕ ನಷ್ಟವಾಗಿದೆ. ವಕ್ಫ್ ಆದೇಶದಂತೆ ಮಳಿಗೆಗಳ ಬಾಡಿಗೆ ನಿಗದಿಪಡಿಸಬೇಕು. ಈಗಾಗಲೇ ಬಾಡಿಗೆದಾರರು ನೀಡಿದ ಬಾಡಿಗೆ ಮೊತ್ತ, ಖರ್ಚು ಮಾಡಿದ ಲೆಕ್ಕಪತ್ರಗಳನ್ನು ಕೂಡಲೇ ಸದಸ್ಯರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net