ಮಹನೀಯರ ಸದ್ಗುಣಗಳ ಮೈಗೂಡಿಸಿಕೊಳ್ಳಿ

Harpanahalli Bjp
ಜನಸಂಘ ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ನಿಮಿತ್ತ ಹರಪನಹಳ್ಳಿಯ ಬಿಜೆಪಿ ಕಚೇರಿ ಆವರಣದಲ್ಲಿ ಭಾನುವಾರ ಸಸಿಗಳನ್ನು ನೆಡಲಾಯಿತು. ಮಂಡಲ ಅಧ್ಯಕ್ಷ ಕೆ ಲಕ್ಷ್ಮಣ, ಪದಾಧಿಕಾರಿಗಳಾದ ಬಾಗಳಿ ಕೊಟ್ರೇಶಪ್ಪ, ಹಾರಾಳು ಅಶೋಕ್, ಎಂ.ಪಿ.ನಾಯ್ಕ, ಕಣಿವಿಹಳ್ಳಿ ಮಂಜುನಾಥ, ಚನ್ನನಗೌಡ, ವೆಂಕಟೇಶ್ ನಾಯ್ಕ ಇತರರಿದ್ದರು.
Published on

ಹರಪನಹಳ್ಳಿ: ದೇಶದ ಅಖಂಡತೆಗಾಗಿ ಜೀವನವನ್ನೇ ಮುಡಿಪಿಟ್ಟ ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಪಡೆದ ನಾವೇ ಧನ್ಯರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕೆ.ಲಕ್ಷ್ಮ್ಮಣ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜನಸಂಘ ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ 49ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಪ್ರತಿ ಬೂತ್‌ನಲ್ಲಿ ದೇಶಕ್ಕಾಗಿ ಬಲಿದಾನಗೈದ ಶ್ಯಾಮಪ್ರಸಾದ್ ಅವರ ಭಾವಚಿತ್ರವಿಟ್ಟು ಗೌರವ ಸಲ್ಲಿಸಬೇಕು. ಇಂತಹ ಮಹನೀಯರ ಸದ್ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸದೃಢ ದೇಶ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ಕಚೇರಿ ಮುಂಭಾಗದಲ್ಲಿರುವ ಪಾರ್ಕ್‌ನಲ್ಲಿ ಸಸಿಗಳನ್ನು ನೆಡಲಾಯಿತು. ಪ್ರಮುಖರಾದ ಸಂಗಮೇಶ ಕಡೆಮನಿ, ಕುಸುಮಾ ಜಗದೀಶ್, ಬಾಗಳಿ ಜಗದೀಶ್, ರೇಖಮ್ಮ, ಮುದುಕವ್ವನವರ ಶಂಕರ್, ಸುರೇಶ್ ಶಾನಭೋಗ, ಕಡಕೋಳ ಸಿದ್ದಪ್ಪ, ಓಂಕಾರ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net