ಮನುಷ್ಯನ ದುರಾಸೆಯಿಂದ ಕಾಡು ನಾಶ

1
ತೆಲಸಂಗ ಗ್ರಾಮದ ಜ್ಞಾನಭಾರತಿ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡಲಾಯಿತು. ಗಫೂರ್ ಮುಲ್ಲಾ, ದಸ್ತಗೀರ್ ಪಕಾಲಿ, ರಾಜು ಅಗಸರ, ದಾನಮ್ಮ ಬಿಜ್ಜರಗಿ, ಸಾವಿತ್ರಿ ಜತ್ತಿ ಇತರರು ಇದ್ದರು.
Published on

ತೆಲಸಂಗ: ಹಣದಾಸೆಗೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡಿದ್ದರ ಪರಿಣಾಮವೇ ಪ್ರಕೃತಿ ವಿಕೋಪಕ್ಕೆ ಕಾರಣ ಎಂದು ಮುಖ್ಯ ಶಿಕ್ಷಕ ಗಫೂರ್ ಮುಲ್ಲಾ ಹೇಳಿದರು.

ಗ್ರಾಮದ ಜ್ಞಾನ ಭಾರತಿ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ನಿಮಿತ್ತ ಬುಧವಾರ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರವನ್ನು ಉಳಿಸಿ, ಬೆಳೆಸದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು. ಪ್ರತಿಯೊಬ್ಬರೂ ಗಿಡ-ಮರ ಸೇರಿದಂತೆ ಪ್ರಕೃತಿಯ ಬಗ್ಗೆ ಕಾಳಜಿ ಹೊಂದೋಣ ಎಂದರು.

ಶಿಕ್ಷಕ ದಸ್ತಗೀರ್ ಪಕಾಲಿ, ರಾಜು ಅಗಸರ, ದಾನಪ್ಪ ಜತ್ತಿ, ದಾನಮ್ಮ ಬಿಜ್ಜರಗಿ, ಸಾವಿತ್ರಿ ಜತ್ತಿ, ನಿವೇದಿತಾ ಮೋರೆ, ಅಂಬಿಕಾ ಬಡ್ಡೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net