

ಚಿಕ್ಕೋಡಿ: ಜ್ಞಾನದ ಬೆಳಕಿನಿಂದ ಅಜ್ಞಾನ ದೂರ ಎಂದು ಮಹೇಂದ್ರ ಪಾಟೀಲ ಹೇಳಿದರು.
ತಾಲೂಕಿನ ಧುಳಗನವಾಡಿ ಸದ್ಗುರು ಶರಣ ಕಲಾಸೇವಾ ಮಂಡಳ, ನವಲಿಹಾಳ ಹುನುಮಾನ ಭಜನಾ ಮಂಡಳ ಸಹಯೋಗದಲ್ಲಿ ಧುಳಗನವಾಡಿ ವಿಠ್ಠಲ ಮಂದಿರದಲ್ಲಿ ಏಕಾದಶಿ ಪ್ರಯುಕ್ತ ಈಚೆಗೆ ಹಮ್ಮಿಕೊಂಡ ಸಂಚಾರಿ ಪ್ರವಚನ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಠಾಳಿಯ ಹರಿ ಭಜನಾ ಕಲಾವಿದ ಭೀಮಪ್ಪ ತೋಡಕರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಗ್ರಾಮದ ಕಲಾವಿದರು ಭಜನಾ ಸೇವೆ ನಡೆಸಿಕೊಟ್ಟರು
. ಪರಶುರಾಮ ಹೆಗಡೆ, ಶಂಕರ ಖೋತ ವಾದ್ಯ ಸಹಕಾರ ನೀಡಿದರು. ಸಂಘದ ಅಧ್ಯಕ್ಷ ರಾಜು ಸುತಾರ ಅಧ್ಯಕ್ಷತೆ ವಹಿಸಿದ್ದರು. ಅಪ್ಪಾಸಾಹೇಬ ಖೋತ, ಚಂದ್ರಕಾಂತ ಚೌಗಲೆ, ಮಹೇಶ ಪಕಾಲೆ, ಮಾರುತಿ ಕಾಮಗೌಡಾ, ಗುಣಾಬಾಯಿ ಚೊಕಾ ಇದ್ದರು. ಭರತ ಕಲಾಚಂದ್ರ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸುಜಾತಾ ಮಗದುಮ್ಮ ನಿರೂಪಿಸಿ, ವಂದಿಸಿದರು.