

ಘಟಪ್ರಭಾ: ನಮ್ಮ ದೇಶದಲ್ಲಿ ಗುರುವಿನ ಮೇಲಿರುವ ಭಕ್ತಿ ಎಂದಿಗೂ ಕಡಿಮೆಯಾಗುವುದಿಲ್ಲ. ಭಾರತದಲ್ಲಿ ಮಾತ್ರ ಗುರು ಪರಂಪರೆಗೆ ಉನ್ನತ ಸ್ಥಾನವಿದೆ ಎಂದು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಇಲ್ಲಿನ ಎಸ್‌ಡಿಟಿ ಪ್ರೌಢಶಾಲೆಯ 1995ನೆಯ ಸಾಲಿನ ಹಳೆಯ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಅನ್ನಕ್ಕೆ ದಾರಿ ದೀಪವಾದ ಗುರುಗಳನ್ನು ದೇವರೆಂದು ಭಾವಿಸುತ್ತೇವೆ. ಗುರುಗಳನ್ನು 30 ವರ್ಷಗಳ ನಂತರವೂ ವಿದ್ಯಾರ್ಥಿಗಳೆಲ್ಲರೂ ಸೇರಿ ಗೌರವಿಸುತ್ತಿರುವುದು ಈ ನೆಲದ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಶ್ರೀಕ್ಷೇತ್ರ ಅರಬಾವಿ ಮಠದ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಈ ಸಂಘದ ಮೂಲಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಆಶೀರ್ವದಿಸಿದರು.
ಸಂಘದ ಅಧ್ಯಕ್ಷ ಕೆ.ಎಸ್. ನಾಗರಾಜ್ ಮಾತನಾಡಿ, ಹಲವಾರು ಶಾಶ್ವತ ಅಭಿವದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ನಿವತ್ತ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಡಾ.ನಾಗರಾಜ ಚರಂತಿಮಠ, ವಿದ್ಯಾನಂದ ನಾಯಿಕ, ಭಾಗ್ಯಶ್ರೀ ಪಡೆಪ್ಪಗೋಳ ಅವರನ್ನು ನಮ್ಮ ಎಸ್‌ಡಿಟಿ ಹೈಸ್ಕೂಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರ್ಜುನ ಸಂಪಗಾರ, ಗೀತಾ ಬೆನವಾಡಿ, ಶೇಖರ ಬೆಟಗೇರಿ, ಕುಮಾರಯ್ಯ ಕರ್ಪೂರಮಠ, ವಿಜಯಕುಮಾರ ಬಡಕುಂದ್ರಿ, ಸಂಜೀವ ನಾಯಿಕ, ಸೋಮಶೇಖರ ಜಿನರಾಳೆ, ಪ್ರಕಾಶ ಮಟಗಾರ, ಜಯಪ್ರಕಾಶ ಕಾಡದವರ, ಸುವರ್ಣ ಗಾಡಿವಡ್ಜರ ಮತ್ತು ನಿವೇದಿತಾ ಚರಂತಿಮಠ ಇತರರಿದ್ದರು.