ಸತ್ಪ್ರಜೆಗಳ ರೂಪಿಸುವ ಶಿಕ್ಷಕರ ಸೇವೆ ಸ್ಮರಣೀಯ

28..1
ಅಥಣಿ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗಜಾನನ ಮಂಗಸೂಳಿ, ರೇಷ್ಮಾ ಇನಾಮದಾರ, ಅನಿಲ ದೇಶಪಾಂಡೆ, ಸಚಿನ ದೇಸಾಯಿ ಇತರರಿದ್ದರು.
Published on

ಅಥಣಿ: ಭವ್ಯ ಭಾರತದ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಸೇವೆ ಸ್ಮರಣೀಯ ಎಂದು ಅಥಣಿ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಪಟ್ಟಣದ ಗುಜರಾಥಿ ಭವನದಲ್ಲಿ ರೋಟರಿ ಕ್ಲಬ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ರಜತ ಮಹೋತ್ಸವ ವರ್ಷವಾಗಿರುವುದರಿಂದ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ರೋಟರಿ ಕ್ಲಬ್ ಆಯೋಜಿಸುತ್ತಿದೆ. ಡಿ ದರ್ಜೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಪೌರಕಾರ್ಮಿಕರು ಮತ್ತು ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಗ್ರೀನ್‌ಬೋರ್ಡ್ ವಿತರಿಸಲಾಗಿದೆೆ ಎಂದರು.
ಎಸ್.ಎಂ.ಎಸ್. ಮಹಾವಿದ್ಯಾಲಯದ ಪದವಿಪೂರ್ವ ವಿಭಾಗದ ಪ್ರಾಚಾರ್ಯೆ ರೇಷ್ಮಾ ಇನಾಮದಾರ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಮಾರ್ಗವೇ ಶಿಕ್ಷಣ. ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನದಲ್ಲಿ ತೊಡಗಿ ಬದುಕು ರೂಪಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಅನಿಲ ದೇಶಪಾಂಡೆ ಮಾತನಾಡಿ. ಶಿಕ್ಷಕರು ನಿರಂತರ ಕಲಿಕೆಯಲ್ಲಿರುತಾರೆ. ಅವರ ಸೇವೆ ಗುರುತಿಸಿ ಗೌರವಿಸುವುದು ಹೆಮ್ಮೆಯ ಸಂಗತಿ ಎಂದರು.
ರೋಟರಿ ಸದಸ್ಯರಾದ ಸಚಿನ ದೇಸಾಯಿ, ಲಲಿತಾ ಮೇಕನಮರಡಿ, ವೈಶಾಲಿ ಮಠಪತಿ, ಅರುಣ ಯಲಗುದ್ರಿ, ಪ್ರವೀಣ ಭಾಟೆ, ದೀಪಕ ಪಾಟೀಲ, ಶೇಖರ ಕೋಲಾರ, ಭರತ ಸೋಮಯ್ಯ, ಶ್ರೀಕಾಂತ ಅಥಣಿ, ಧನಪಾಲ ಮೇಕನಮರಡಿ, ಸುರೇಶ ಪಾಟೀಲ, ಮೇಘರಾಜ ಪರಮಾರ, ಸಂತೋಷ ಬೊಮ್ಮಣ್ಣವರ, ಬಾಹುಬಲಿ ಅಸ್ಕಿ, ಬಾಳಪ್ಪ ಬುಕಿಟಗಾರ, ಶೋಭಾ ಕೋಲಾರ, ಮಹಾದೇವಿ ಪಾಟೀಲ, ಸುರೇಖಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net