ಹಬ್ಬಗಳ ಆಚರಣೆಯಲ್ಲಿ ನಿರ್ಲಕ್ಷ್ಯ ಸಲ್ಲ

16Huk1
Published on

ಹುಕ್ಕೇರಿ: ರಾಷ್ಟ್ರೀಯ ಹಬ್ಬ ಮತ್ತು ಮಹಾನ್ ಪುರುಷರ ದಿನಾಚರಣೆಗೆ ನಿರ್ಲಕ್ಷೃವಹಿಸುತ್ತಿರುವ ತಾಲೂಕುಮಟ್ಟದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ರಾಷ್ಟ್ರೀಯ ಹಬ್ಬಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಮಂಜುಳಾ ನಾಯಕ ತಿಳಿಸಿದರು.

ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ಸಭೆಗೆ ಕೆಳಹಂತದ ಸಿಬ್ಬಂದಿ ಕಳುಹಿಸುವುದು, ಸಮಾರಂಭಗಳ ಮಧ್ಯೆಯೇ ನಿರ್ಗಮಿಸುವ ಪ್ರವೃತ್ತಿ ಬಿಡಬೇಕು. ಸಭೆಗೆ ಗೈರಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖಂಡರಾದ ಉದಯ ಹುಕ್ಕೇರಿ, ಸುನೀಲ ಭೈರಣ್ಣವರ, ರಾಜು ಕುರಂದವಾಡೆ, ಕಬೀರ ಮಲೀಕ್, ತಮಣ್ಣಗೌಡ ಪಾಟೀಲ, ರಾಜು ಬಾಗಲಕೋಟೆ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸುವಂತೆ ಸಲಹೆ ನೀಡಿದರು.

ತಾಪಂ ಇಒ ಟಿ.ಆರ್.ಮಲ್ಲಾಡದ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಬಿಇಒ ಪ್ರಭಾವತಿ ಪಾಟೀಲ, ಅಕ್ಷರ ದಾಸೋಹ ಇಲಾಖೆಯ ಸವಿತಾ ಹಲಕಿ, ವಿದ್ಯುತ್ ಸಹಕಾರಿ ಸಂಘದ ವ್ಯವಸ್ಥಾಪಕ ದುರದುಂಡಿ ನಾಯಿಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಆರ್.ಬಿ.ನಾಯ್ಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೊಳೆಪ್ಪ ಎಚ್., ಸಮಾಜ ಕಲ್ಯಾಣ ಇಲಾಖೆಯ ಎಚ್.ಎ.ಮಾಹುತ, ಶಿಕ್ಷಕರ ಸಂಘದ ಅಧ್ಯಕ್ಷ ವಿನಾಯಕ ನಾಯಿಕ, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net