

ಹೂವಿನಹಡಗಲಿ: ಸಂವಿಧಾನ ನೀಡಿದ ಹಕ್ಕುಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು ಎಂದು ನ್ಯಾಯಾಧೀಶೆ ಅಕ್ಷತಾ ಟಿ ಹೇಳಿದರು.
ಪಟ್ಟಣದ ಜೆಎಂಎ್ಸಿ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘದಿಂದ ವಿಶ್ವ ಸಾಮಾಜಿಕ ನ್ಯಾಯದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಹಕ್ಕು ಮಾನವನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಅಕ್ಷರವನ್ನು ಕಲಿತವರಿಗೆ ಸಾಕಷ್ಟು ಅವಕಾಶಗಳು ದೊರಕುತ್ತವೆ. ಸಂವಿಧಾನದ ಅಡಿಯಲ್ಲಿರುವ ಎಲ್ಲ ಹಕ್ಕುಗಳಿಗೂ ತನ್ನದೆಯಾದ ಸ್ವಾತಂತ್ರ್ಯವಿದೆ ಎಂದರು. ಪ್ರಮುಖರಾದ ಹನುಮಂತಪ್ಪ, ಮಲ್ಲಿಕಾರ್ಜುನ, ಬಸವರಾಜ, ಅಟವಾಳಗಿ ಕೊಟ್ರೇಶ ಇತರರಿದ್ದರು.