

ಕಂಪ್ಲಿ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಕುರುಗೋಡು ಬಿಇಒ ಟಿ.ಎಂ. ಸಿದ್ದಲಿಂಗಮೂರ್ತಿ ತಿಳಿಸಿದರು.
ಇದನ್ನೂ ಓದಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ
ಇಲ್ಲಿನ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಎಸ್.ಎನ್.ಪೇಟೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರ ಪ್ರತಿಭೆಯನ್ನು ಗುರುತಿಸಿ ಸಾಂಸ್ಕೃತಿಕವಾಗಿ ಮುನ್ನೆಲೆಗೆ ತರಬೇಕು ಎಂದರು.
ಶಾಸಕ ಜೆ.ಎನ್.ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ವಿಭಾಗದಲ್ಲಿ 10 ವೈಯಕ್ತಿಕ, ಪ್ರೌಢಶಾಲೆ ವಿಭಾಗದಲ್ಲಿ 14 ವೈಯಕ್ತಿಕ, 3 ಸಾಮೂಹಿಕ ಸ್ಪರ್ಧೆಗಳು ನಡೆದವು.
ತಾಪಂ ಎಡಿ ಕೆ.ಎಸ್.ಮಲ್ಲನಗೌಡ, ಪುರಸಭೆ ಸದಸ್ಯ ಟಿ.ವಿ.ಸುದರ್ಶನರೆಡ್ಡಿ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಎಂ.ಎ.ನಾಗನಗೌಡ, ಕೆ.ಹುನುಮಂತಪ್ಪ, ಜೋಗಿ ನಾಯ್ಕ ರುದ್ರಪ್ಪ, ಸುನೀತಾ ಪೂಜಾರಿ, ರಾಜೇಶ್ವರಿ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಭೂಮೇಶ್ವರ, ಈರೇಶ, ಶಿಕ್ಷಕರಾದ ಟಿ.ಎಂ.ಬಸವರಾಜ, ಶಂಕರ ಮೂರ್ತಿ, ಚಂದ್ರಯ್ಯ ಸೊಪ್ಪಿಮಠ, ಅಶೋಕ್ ರೆಡ್ಡಿ, ಮುಖ್ಯಶಿಕ್ಷಕ ಮರಿಯಪ್ಪ, ಪ್ರಮುಖರಾದ ಕೆ.ಷಣ್ಮುಖಪ್ಪ, ಬಿ.ನಾರಾಯಣಪ್ಪ ಇತರಿದ್ದರು.