ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರತಿ ಮತವೂ ಮುಖ್ಯ

26BLH7-web
ಬೈಲಹೊಂಗಲದಲ್ಲಿ ಗುರುವಾರ ಮತದಾನ ಜಾಗೃತಿ ಜಾಥಗೆ ಪ್ರಭಾವತಿ ಫಕೀರಪುರ ಚಾಲನೆ ನೀಡಿದರು. ಸಚ್ಚಿದಾನಂದ ಕೊಚನೂರ, ಸುಭಾಸ ಸಂಪಗಾಂವ, ಎ.ಎನ್.ಪ್ಯಾಟಿ ಇತರರು ಇದ್ದರು.
Published on

ಬೈಲಹೊಂಗಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಸೂಕ್ತ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ಸ್ಥಳದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕು ಸ್ವೀಪ್ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಎಸ್‌ಜಿವಿ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.

ತಹಸೀಲ್ದಾರ್ ಸಚ್ಚಿದಾನಂದ ಕೊಚನೂರ, ತಾಪಂ ಇಒ ಸುಭಾಷ ಸಂಪಗಾಂವ, ಬಿಇಒ ಎ.ಎನ್.ಪ್ಯಾಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಸಮನ್ವಯಾಧಿಕಾರಿ ಎಸ್.ಬಿ.ಕಸಾಳೆ, ಅಜ್ಜಪ್ಪ ಅಂಗಡಿ, ಪ್ರಾಚಾರ್ಯ ಎಸ್.ಆರ್.ಕಲಹಾಳ, ವಕೀಲರ ಸಂಘದ ಅಧ್ಯಕ್ಷ ಮಡಿವಾಳಪ್ಪ ಮೆಳವಂಕಿ, ವಕೀಲ ಸಂತೋಷ ಭಾವಿ, ಎಸ್.ಬಿ.ಸಂಗನಗೌಡರ ಇತರರಿದ್ದರು. ಚನ್ನಮ್ಮನ ಸಮಾಧಿ ಸ್ಥಳದಿಂದ ಆರಂಭವಾದ ಜಾಥಾ ವಿವಿಧ ಬೀದಿಗಳಲ್ಲಿ ಸಂಚರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net