

ಲೌಕಿಕದ ಜತೆಗೆ ಅಧ್ಯಾತ್ಮದ ಚಿಂತನೆಗಳು ಸೇರಿಕೊಂಡಾಗ ಬದುಕು ಅರ್ಥಪೂರ್ಣವಾಗುತ್ತದೆ. ಬುದ್ಧಿಗೆ ಪ್ರಚೋದನೆ ಸಿಗುವ ವಿಚಾರಗಳು ಬೇಕಾಗಿದ್ದು, ಅವುಗಳು ಸಿಗುವ ರೀತಿಯನ್ನು ಅವಲೋಕಿಸಬೇಕಾಗಿದೆ. ಬದುಕು ರೂಪಿಸಿಕೊಳ್ಳಲು ಆರಂಭ ಮತ್ತು ಅಂತ್ಯದ ನೆನಪಿನ ಜತೆಗೆ ಸರಿಯಾದ ಶಿಕ್ಷಣದ ಅಗತ್ಯವಿದ್ದು, ಶಾಲೆಯ ಪ್ರಾರಂಭ ಬದುಕಿನ ಆರಂಭವೂ ಆಗಿರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭೋತ್ಸವದಲ್ಲಿ ಶುಕ್ರವಾರ ನೂತನ ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಽ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ಮಕ್ಕಳನ್ನು ಸ್ವಾಗತಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು, ಕಾರಣರಾದ ಶಿಕ್ಷಕರನ್ನು, ಪಾಲಕರನ್ನು ಅಭಿನಂದಿಸಲಾಯಿತು.
ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಮುಂಬೈ ಘಟಕ ಸದಸ್ಯೆ ಕಲ್ಪನಾ ಕೃಷ್ಣ ಶೆಟ್ಟಿ ಮುಂಬೈ, ಉದ್ಯಮಿ ಆನಂದ ಶೆಟ್ಟಿ ನ್ಯೂಯಾರ್ಕ್, ವೈದ್ಯರಾದ ಡಾ.ಅಮಿತಾ ಶೆಟ್ಟಿ, ಡಾ.ಅನುರಾಧಾ ಶೆಟ್ಟಿ, ಪ್ರಮುಖರಾದ ನೇತ್ರಾ ಪ್ರತಾಪ್ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಮುಖ್ಯ ಕಾರ್ಯನಿರ್ವಹಣಾಽಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಕನ್ಯಾನ ಶ್ರೀ ಗುರುದೇವ ಐಟಿಐ ಪ್ರಾಂಶುಪಾಲ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ರೇಣುಕಾ ಎಸ್.ರೈ ಪ್ರಾಸ್ತಾವಿಕ ಮಾತನಾಡಿ, ಸಾನ್ವಿ ಸಿ.ಎಸ್. ಸ್ವಾಗತಿಸಿ, ಶಮಾ ವಂದಿಸಿ, ಹೃಷಿಕಾ ಕಾರ್ಯಕ್ರಮ ನಿರೂಪಿಸಿದರು.
ಜೀವನ ಸಾರ್ಥಕತೆ ಪಡೆಯುವ ಶಿಕ್ಷಣ ಕೊಡಿಸುವ ಜವಾಬ್ದಾರಿಯಿದೆ. ಅಧ್ಯಾತ್ಮದ ಬೆಳಕು ಇರುವವರೆಗೆ ಭಾರತಕ್ಕೆ ಅಪಾಯವಿಲ್ಲ. ಆನಂದ ಎಂಬುದು ಅಂತರಂಗ ತಲುಪುತ್ತದೆ. ಆದರ್ಶ ರಾಷ್ಟ್ರ ನಿರ್ಮಾಣದ ಅಡಿಗಲ್ಲು ಹಾಕುವ ನೆನಪು ಪ್ರತಿಯೊಬ್ಬರಿಗೆ ಇದ್ದಾಗ ಭವ್ಯ ಭಾರತದ ನಿರ್ಮಾಣವಾಗುತ್ತದೆ.
| ಶ್ರೀ ಗುರುದೇವಾನಂದ ಸ್ವಾಮೀಜಿ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ