ಜ್ಞಾನದಿಂದ ಅಂಧಕಾರ ದೂರ -  ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಮತ

PTR_11 JUN_1
Published on

ವಿಟ್ಲ: ತೇಯುವ ಮೂಲಕ ಉಜ್ವಲತೆ ಪಡೆಯಬಹುದು. ಜ್ಞಾನದಿಂದ ಅಂಧಕಾರ ತೊಲಗಿಸಬಹುದು. ಅವಲೋಕನದ ಮೂಲಕ ಉತ್ತಮ ವೃತ್ತಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಕನ್ಯಾನ ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ವಾರ್ಷಿಕೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು.

ಮಂಗಳೂರು ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಸೀನಿಯರ್ ಎಕ್ಸಿಕ್ಯುಟಿವ್ ಸವಿಸ್ತಾರ ಆಳ್ವ, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ ಪಿ.ಆರ್. ನಿಡ್ಪಳ್ಳಿ, ಅಡ್ಯನಡ್ಕ ಜನತಾ ಪದವಿ ಪೂರ್ವ ವಿದ್ಯಾಲಯ ಪ್ರಾಂಶುಪಾಲ ಟಿ.ಶ್ರೀನಿವಾಸ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಉಪಸ್ಥಿತರಿದ್ದರು.

ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಪ್ರವೀಣಕುಮಾರ್ ಎನ್. ಸ್ವಾಗತಿಸಿದರು. ಕಿರಿಯ ಸಹಾಯಕ ತರಬೇತಿ ಅಧಿಕಾರಿ ಜಯಂತ ಅಜೇರು ವಂದಿಸಿದರು. ಕಿರಿಯ ಸಹಾಯಕ ತರಬೇತಿ ಅಧಿಕಾರಿ ಶಿವಪ್ರಸಾದ್ ಬಹುಮಾನಿತರ ಪಟ್ಟಿ ಓದಿದರು. ಕಿರಿಯ ಸಹಾಯಕ ತರಬೇತಿ ಅಧಿಕಾರಿಗಳಾದ ರೋಹಿತ್ ಕುಮಾರ್, ಸ್ವಾತಿ ಅಡ್ಡಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಆತ್ಮವಿಶ್ವಾಸ ಮತ್ತು ಪ್ರಯತ್ನ ಪ್ರತಿಯೊಬ್ಬನನ್ನೂ ಯಶಸ್ಸಿನೆಡೆಗೆ ಕೊಂಡಿಯ್ಯತ್ತದೆ. ಶಿಸ್ತು ಶ್ರದ್ಧೆ ಬೆಳೆಸಿಕೊಂಡು ಶಿಕ್ಷಣವನ್ನು ಪಡೆದುಕೊಳ್ಳುವ ಕಾರ್ಯವಾಗಬೇಕಾಗಿದೆ.

| ಸಾಧ್ವಿ ಮಾತಾನಂದಮಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net