ಮಾನವ ಧರ್ಮ ಉದ್ದೀಪನವಾಗಲಿ ODIYOORU

ಜನ್ಮದಿನೋತ್ಸವ ಗ್ರಾಮೋತ್ಸವ ಸೇವಾ ಸಂಭ್ರಮ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಧ್ವೀ ಮಾತಾನಂದಮಯಿ, ಪದ್ಮನಾಭ ಕೊಟ್ಟಾರಿ, ಕೃಷ್ಣ ಶೆಟ್ಟಿ ತಾರೆಮಾರ್, ಎ.ಸುರೇಶ್ ರೈ ಇದ್ದರು.
ಜನ್ಮದಿನೋತ್ಸವ ಗ್ರಾಮೋತ್ಸವ ಸೇವಾ ಸಂಭ್ರಮ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಧ್ವೀ ಮಾತಾನಂದಮಯಿ, ಪದ್ಮನಾಭ ಕೊಟ್ಟಾರಿ, ಕೃಷ್ಣ ಶೆಟ್ಟಿ ತಾರೆಮಾರ್, ಎ.ಸುರೇಶ್ ರೈ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಡಿಯೂರು ಶ್ರೀ ಆಶೀರ್ವಚನ
  • ಗ್ರಾಮೋತ್ಸವ ಸೇವಾ ಸಂಭ್ರಮ ಸಮಾಲೋಚನಾ ಸಭೆ
ಪುತ್ತೂರು: ಗುರು ಸೇವೆಯಲ್ಲಿ ಅಹಂಕಾರ ರಹಿತವಾದ, ಕಲ್ಮಶ ರಹಿತವಾದ ಕರ್ಮವಿರಬೇಕು. ಸತ್ಕರ್ಮದ ಆಚರಣೆಯಿಂದ ಬದುಕಿನಲ್ಲಿ ಏಳಿಗೆಯಾಗುತ್ತದೆ. ಕರ್ಮಾಚರಣೆಗಳು ಹೊರೆಯಾಗದಂತೆ ನೋಡಿಕೊಳ್ಳಬೇಕು. ಮಾನವ ಧರ್ಮ ಉದ್ದೀಪನ ಆಗಬೇಕು. ಧರ್ಮದ ಅನುಷ್ಠಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಆಗಸ್ಟ್ ೮ರಂದು ನಡೆಯುವ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಸೇವಾ ಸಂಭ್ರಮ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಗೌರವ ಮಾರ್ಗದರ್ಶಕರಾದ ಸಾಧ್ವೀ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕೃಷ್ಣ ಶೆಟ್ಟಿ ತಾರೆಮಾರ್, ಸ್ವಾಗತ ಸಮಿತಿ ಅಧ್ಯಕ್ಷ ಎ.ಸುರೇಶ್ ರೈ, ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಉಪಾಧ್ಯಕ್ಷರಾದ ವೆಂಕಟೇಶ್ ಹೊಳ್ಳ, ದೇವಿಪ್ರಸಾದ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಸುಳ್ಯ ಉಪಸ್ಥಿತರಿದ್ದರು.
ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಮಾತೇಶ್ ಭಂಡಾರಿ ಸ್ವಾಗತಿಸಿದರು. ಸೇರಾಜೆ ಗಣಪತಿ ಭಟ್ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
"

ರಾಷ್ಟ್ರೋತ್ಥಾನಕ್ಕೆ ಗ್ರಾಮೋತ್ಸವ ನಾಂದಿಯಾಗಬೇಕು. ಮನುಷ್ಯ ಪರೋಪಕಾರಿಯಾಗಿ ಬದುಕು ನಡೆಸಬೇಕು. ಉಪದ್ರಗಳಿಂದ ಪಾಪದ ಪ್ರಮಾಣ ಹೆಚ್ಚಾಗುತ್ತದೆ. ಸೇವೆಯೇ ಸಾಧನೆಯಾದಾಗ ಬದುಕಿನಲ್ಲಿ ಸಾರ್ಥಕತೆ ಮೂಡುತ್ತದೆ. ಗ್ರಾಮಗಳ ಮೂಲಕ ರಾಮ ರಾಜ್ಯವಾಗುತ್ತದೆ. ಗ್ರಾಮದ ಬೆಳವಣಿಗೆಯಾಗಲು ಕೃಷಿ ಸಮೃದ್ಧವಾಗಬೇಕು.

— ಶ್ರೀಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net