ಪುತ್ತೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ.೮ರಿಂದ ೧೪ರವರೆಗೆ ಶ್ರೀದತ್ತ ಜಯಂತಿ ಮಹೋತ್ಸವ ಶ್ರೀದತ್ತ ಮಹಾಯಾಗ ಸಪ್ತಾಹ ನಡೆಯಲಿದೆ.
೮ರಂದು ಬೆಳಗ್ಗೆ ದೀಪಾರಾಧನೆ, ಗಣಪತಿ ಹವನ, ದತ್ತ ಮಹಾಯಾಗ ಸಪ್ತಾಹ ಆರಂಭ, ದತ್ತಮಾಲಾಧಾರಣೆ, ಸಾಯಂಕಾಲ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ, ೮ರಿಂದ ೧೪ರವರೆಗೆ ಬೆಳಗ್ಗೆ ೯ರಿಂದ ಗುರುಚರಿತ್ರೆ ಪಾರಾಯಣ, ವೇದ ಪಾರಾಯಣ, ೧೦ರಿಂದ ಹರಿಕಥಾ ಸತ್ಸಂಗ, ೧೧.೩೦ರಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳಿಂದ ಅನುಗ್ರಹ ಸಂದೇಶ, ೧೨.೩೦ರಿಂದ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ೨ರಿಂದ ಪ್ರಸಿದ್ಧ ಕಲಾವಿದರಿಂದ ಶ್ರೀಮದ್ರಾಮಾಯಣ ಯಕ್ಷಗಾನ ಸಪ್ತಾಹ, ರಾತ್ರಿ ೭ರಿಂದ ರಂಗಪೂಜೆ, ಬೆಳ್ಳಿರಥೋತ್ಸವ ನಡೆಯಲಿದೆ. ೧೪ರಂದು ಬೆಳಗ್ಗೆ ೯ರಿಂದ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನಾ ಶೋಭಾಯಾತ್ರೆ, ೧೦ರಿಂದ ಧರ್ಮಸಭೆಯಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಾಽ ಮಾತಾನಂದಮಯೀ ಸಾನ್ನಿಧ್ಯ ವಹಿಸಲಿದ್ದಾರೆ. ೧೨ರಿಂದ ವೇದಪಾರಾಯಣ, ಗುರುಚರಿತ್ರೆ ಪಾರಾಯಣ ಸಮಾಪ್ತಿ, ದತ್ತ ಮಹಾಯಾಗದ ಪೂರ್ಣಾಗುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ಸಂಪ್ರದಾಯದಂತೆ ಮಧುಕರೀ, ಮಂತ್ರಾಕ್ಷತೆ, ರಾತ್ರಿ ೭ರಿಂದ ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆ ನಡೆಯಲಿದೆ.