ನಾಳೆ ಒಡಿಯೂರಲ್ಲಿ ಗುರುವಂದನೆ, ಗ್ರಾಮೋತ್ಸವ

Published on

ಪುತ್ತೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ವತಿಯಿಂದ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ-೨೦೨೫ ಸೇವಾ ಸಂಭ್ರಮ- ಗುರುವಂದನೆ ಆ.೮ರಂದು ಒಡಿಯೂರು ರಾಜಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ ೮ರಿಂದ ಗಣಪತಿ ಹವನ, ಮಹಾಪೂಜೆ, ೯ರಿಂದ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ನಾಮಸಂಕೀರ್ತನೆ, ೯.೩೦ರಿಂದ ಪಾದಪೂಜೆ- ರಜತ ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ, ಮಧ್ಯಾಹ್ನ ೩ರಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ, ಸಂಜೆ ೫ರಿಂದ ಮಂಗಳೂರು ಶ್ರೀ ಲಲಿತೆ ಕಲಾವಿದರಿಂದ ಕದ್ರಿ ನವನೀತ ಶೆಟ್ಟಿ ರಚನೆ ಸಾಹಿತ್ಯದಲ್ಲಿ ಶನಿ ಮಹಾತ್ಮೆ ಕನ್ನಡ ನಾಟಕ, ರಾತ್ರಿ ೭ರಿಂದ ಶ್ರೀ ಸನ್ನಿಽಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ, ಮಹಾಪೂಜೆ ನೆರವೇರಲಿದೆ.

ಬೆಳಗ್ಗೆ ೧೧.೩೦ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಸಾಽ ಮಾತಾನಂದಮಯಿ ಉಪಸ್ಥಿತರಿರುವರು. ಶಾಸಕ ರಾಜೇಶ್ ನಾಕ್, ಅದಾನಿ ಗ್ರೂಪ್ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ, ಎಂಐಒ ಮಂಗಳೂರು ಆಡಳಿತ ನಿರ್ದೇಶಕ ಡಾ.ಡಿ.ಸುರೇಶ್ ರಾವ್, ಅಂಕ್ಲೇಶ್ವರ ಉದ್ಯಮಿ ಶಂಕರ ಕೆ.ಶೆಟ್ಟಿ, ಮಂಗಳೂರು ಎಕ್ಸ್‌ಪರ್ಟ್ ಗ್ರೂಪ್ ಆಫ್ ಎಜುಕೇಶನ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್, ಮುಂಬೈ ವೆಲ್‌ಕಂ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ರವೀಂದ್ರನಾಥ ಭಂಡಾರಿ, ಕಾರ್ಕಳ ಉದಯಕೃಷ್ಣ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲ್, ಮೈಸೂರು ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಆಡಳಿತ ನಿರ್ದೇಶಕ ದಿವಾಕರದಾಸ್ ನೇರ್ಲಾಜೆ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net