ಮೈಸೂರಿನಲ್ಲಿ ಡಿ.23 ರಂದು ಒಡಿಸ್ಸಿ ಉತ್ಸವ

odissi dance festival
Published on

ಮೈಸೂರು: ನಗರದ ರುದ್ರ ನೃತ್ಯಯೋಗ ಶಾಲಾ ವತಿಯಿಂದ ಭುವನೇಶ್ವರದ ಒಡಿಸ್ಸಿ ಇಂಟರ್‌ನ್ಯಾಷನಲ್ ಫೋರಂ, ಪುರಿ ಜಗನ್ನಾಥ ಕಲ್ಚರಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಹಾಗೂ ಮೈಸೂರು ಒಡಿಸ್ಸಿ ಕುಟುಂಬಗಳ ಸಹಭಾಗಿತ್ವದಲ್ಲಿ 2ನೇ ಬಾರಿಗೆ ರಾಮಕೃಷ್ಣ ನಗರದ ರಮಾಗೋವಿಂದ ರಂಗ ಮಂದಿರದಲ್ಲಿ ಡಿ.23 ರಂದು ಸಂಜೆ 5.30ಕ್ಕೆ ಒಡಿಸ್ಸಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವದ ಸಂಚಾಲಕಿ ಸಿಂಧು ಕಿರಣ್ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಹೆಸರಾಂತ ಒಡಿಸ್ಸಿ ನೃತ್ಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಒಡಿಸ್ಸಿ ನೃತ್ಯ ಉತ್ಸವದಲ್ಲಿ ಮೈಸೂರಿನ ಸಿಂಧು ಕಿರಣ್ ಮತ್ತು ಸುತ್ತ್ಯಶ್ರೀ, ದುಬೈನ ಜೋತ್ಸ್ನಾ ಅಪ್ಪಯ್ಯ, ಕೋಲ್ಕತ್ತದ ತಾನಿಯಾ ಮನ್ನಾ, ಬೆಂಗಳೂರಿನ ಲಿಪಿಕಾ ನಾಯಕ್, ಪಾಯಲ್ ಮುಂಜಂದಾರ್ ಮಂಡಲ್, ಏನಾಕ್ಷಿ ಮುಜುಂದಾರ್ ಮಂಡಲ್, ದೀಪಿಕಾ ರತ್ನಾಕರ್, ಜನೀಲ್, ಕೆ. ಜ್ಯೋರ್ತಿಮಯಿ ಪಟ್ನಾಯಕ್ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅತಿಥಿಗಳಾಗಿ ಪುರಿ ಜಗನ್ನಾಥ ಕಲ್ಚರಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಘನಶ್ಯಾಮ ಪ್ರಧಾನ್, ಭೂಷಣ್ ಪ್ರದರ್ಶಕ ಕಲೆಗಳ ಅಕಾಡೆಮಿ ಸಂಸ್ಥಾಪಕ ಬದರಿ ದಿವ್ಯ ಭೂಷಣ್, ಶ್ರೀಕೃಷ್ಣ ಸೇವಾ ಸಮಿತಿಯ ಕಾರ್ಯದರ್ಶಿ ಭಾರತಿ ಶ್ರೀಧರ ರಾಜೇ ಅರಸ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಬಿ.ವಿ. ಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮೈಸೂರು ಒಡಿಸ್ಸಿ ಕುಟುಂಬದ ಸದಸ್ಯ ವೈದ್ಯನಾಥ್ ಮಾತನಾಡಿ, ಮೈಸೂರಿನಲ್ಲಿ ಒಡಿಸ್ಸಿ ನೃತ್ಯವನ್ನು ಜನಪ್ರಿಯಗೊಳಿಸಲು ಒಡಿಸ್ಸಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಉತ್ಸವದ ಸಂಚಾಲಕಿ ವಿದುಷಿ ಸಿಂಧು ಕಿರಣ್ ಮೈಸೂರಿನಲ್ಲಿ ಒಡಿಸ್ಸಿ ನೃತ್ಯವನ್ನು ಕಲಿಸುತ್ತಿದ್ದಾರೆ. ಇದಕೋಸ್ಕರ 2006ರಲ್ಲಿ ಅವರು ಗೋಕುಲಂನಲ್ಲಿನ ರುದ್ರ ನೃತ್ಯ ಯೋಗಶಾಲೆ ಪ್ರಾರಂಭಿಸಿದರು. ಇವರು ಸಂಗೀತ, ನೃತ್ಯ ಹಾಗೂ ಸಮರ ಕಲೆಯಾದ ಕಲಾರಿ ಪಯಟ್ಟುವಿನಲ್ಲಿ ಪರಿಣಿತಿ ಹೊಂದಿದ ಬಹುಮುಖ ಪ್ರತಿಭೆಯಾಗಿದ್ದಾರೆ. ಓಡಿಸ್ಸಿಯಲ್ಲದೇ ಮೋಹಿನಿ ಅಟ್ಟಂನಲ್ಲಿಯೂ ಗಮನ ಸೆಳೆದಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net