ಒಡಿಶಾ ರೈಲು ದುರಂತ : ಮೈಸೂರಿನಲ್ಲಿ ಮೋಂಬತ್ತಿ ಹಚ್ಚಿ ಸಂತಾಪ

odisha train accident
Published on

ಮೈಸೂರು: ಒಡಿಶಾದ ಬಾಲಾಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ನಗರದ ಟಿ.ಕೆ. ಲೇಔಟ್‌ನ ಮಾರುತಿ ವೃತ್ತದಲ್ಲಿ ಶನಿವಾರ ಯುವ ಭಾರತ್ ಸಂಘಟನೆ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಮೋಂಬತ್ತಿ ಹಚ್ಚಿ ಸಂತಾಪ ಸೂಚಿಸಲಾಯಿತು.

ಈ ಸಂದರ್ಭ ಯುವ ಭಾರತ್ ಸಂಘಟನೆ ಅಧ್ಯಕ್ಷ ಜೋಗಿ ಮಂಜು, ಬಿಜೆಪಿ ಮಾಧ್ಯಮ ಸಹಸಂಚಾಲಕ ಪ್ರದೀಪ್ ಕುಮಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಸಾಮಾಜಿಕ ಹೋರಾಟಗಾರರಾದ ವಿಕ್ರಮ ಅಯ್ಯಂಗಾರ್, ಭೈರತಿ ಲಿಂಗರಾಜು, ಕಿಶೋರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net