ಓಡೀಲು ವರಮಹಾಲಕ್ಷ್ಮೀ ವ್ರತ ಪೂಜೆ

Bel_Odilu-pooje
Published on

ಬೆಳ್ತಂಗಡಿ: ವರಮಹಾಲಕ್ಷ್ಮೀ ಪೂಜಾ ಸಮಿತಿ ರಾಷ್ಟ್ರಸೇವಿತಾ ಸಮಿತಿ, ನಂದಿನಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಓಡೀಲು ಪಡಂಗಡಿ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆ ತಂತ್ರಿಗಳಾದ ಮುಂಡೂರು ಗೋಪಾಲಕೃಷ್ಣ ಭಟ್ ಮಾಲಾಡಿ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.

ಮಧ್ಯಾಹ್ನ ರಕ್ಷಾ ಬಂಧನ ಹಾಗೂ ಧಾರ್ಮಿಕ ಸಭೆ ನಡೆಯಿತು. ಧಾರ್ಮಿಕ ಉಪನ್ಯಾಸಕರಾಗಿ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ರಾಷ್ಟ್ರ ಸೇವಿಕಾ ಸಮಿತಿಯ ಮೀನಾಕ್ಷಿ ಹೊಯ್ಸಳ ವರಮಹಾಲಕ್ಷ್ಮೀ ವ್ರತದ ಬಗ್ಗೆ ಉಪನ್ಯಾಸ ನೀಡಿದರು.

ವರಮಹಾಲಕ್ಷ್ಮೀ ಪೂಜಾ ಸಮಿತಿ ಸಂಘಕರು ಶೀಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸುಮಲತಾ ಸಂಪತ್ ಸುವರ್ಣ ಉಪಸ್ಥಿತರಿದ್ದರು. ದಿವ್ಯಾ ಆಚಾರ್ಯ ಸ್ವಾಗತಿಸಿ, ಸುಗುಣ ರಾವ್ ನಿರೂಪಿಸಿ. ಆಶಾ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net