

ಉಳ್ಳಾಲ : ಬೋಳಿಯಾರ್ ಗ್ರಾಮ ಅಭಿವೃದ್ಧಿಗೆ ಶಾಸಕರು 1.30 ಕೋಟಿ ರೂ. ಅನುದಾನ ಸಹಿತ ಎರಡು ದೊಡ್ಡ ರಸ್ತೆಗಳಿಗೆ ದೊಡ್ಡ ಮೊತ್ತದ ಅನುದಾನ ಮಂಜೂರುಗೊಳಿಸಿದ್ದಾರೆ. ಈ ಕಾಮಗಾರಿ ನಡೆದರೆ ಗ್ರಾಮದಲ್ಲಿ ಎಲ್ಲ ಕಾಮಗಾರಿ ಮುಗಿದಂತಾಗುತ್ತದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು.
ಬೋಳಿಯಾರ್ ಗ್ರಾಮದ ಒಡಿಕ್ಕಿನಕಟ್ಟೆ ಶ್ರೀರಾಮ ಮಂದಿರ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುದ್ದಲಿ ಪೂಜೆ ನೆರವೇರಿಸಿದ ಬೋಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಶಕೂರು ಮಾತನಾಡಿ, ಬೋಳಿಯಾರ್ ಜಂಕ್ಷನ್ ಅಭಿವೃದ್ಧಿಗೆ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕಳೆದ ಬಾರಿ ಮದಕ, ಬೋಳಿಯಾರ್ ಮಸೀದಿ ಬಳಿ ಹಾಗೂ ಪಲ್ಲ ರಸ್ತೆ ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಏಪ್ರಿಲ್ ತಿಂಗಳಾಂತ್ಯಕ್ಕೆ ಎಲ್ಲ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆಂದು ತಿಳಿಸಿದರು.
ಬೋಳಿಯಾರ್ ಗ್ರಾಮ ಪಂಚಾಯಿತಿ ಸದಸ್ಯರಾದ ಜೆಸಿಂತಾ ಪಿಂಟೋ, ಶಾರದಾ, ಮೈಮುನಾ, ಸಿದ್ದೀಕ್, ಸಮೀರ್, ಮಾಜಿ ಅಧ್ಯಕ್ಷ ಭಾಸ್ಕರ ಶೆಟ್ಟಿ, ಬೋಳಿಯಾರ್ ವಲಯ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್, ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ನಂದೀಪ್ ಶೆಟ್ಟಿ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ವಲಯಾಧ್ಯಕ್ಷ ರವೀಣ ಬೋಳಿಯಾರ್, ಪ್ರಮುಖರಾದ ಸುದರ್ಶನ್ ಶೆಟ್ಟಿ, ಉಮ್ಮರ್, ಯಶೋಧ, ದಾಮೋದರ್ ಇನ್ನಿತರರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್ ಪ್ರಾಸ್ತಾವಿಕವಾಗಿ ವಾತನಾಡಿದರು.
ಗ್ರಾಮದಲ್ಲಿ ಹಲವು ರಸ್ತೆ ಕಾಮಗಾರಿಗಳಿಗೆ ಶಾಸಕರು ಅನುದಾನ ನೀಡಿದ್ದಾರೆ, ಆದರೂ ಕೆಲವೊಂದು ಕಾಮಗಾರಿಗಳು ಬಾಕಿಯಿದ್ದು ಎಲ್ಲವನ್ನೂ ಶ್ರೀ ನಡೆಸಲಾಗುವುದು. ಅಬ್ದುಲ್ ಜಬ್ಬಾರ್ ಬೋಳಿಯಾರ್, ಮಾಜಿ ಸದಸ್ಯ, ಮಂಗಳೂರು ತಾ.ಪಂ.