

ಅರಕಗೂಡು: ಪಟ್ಟಣದ ಹಾಸನ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 92.5 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 118 ವಿದ್ಯಾರ್ಥಿಗಳಲ್ಲಿ 111 ಮಕ್ಕಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 33 ಅತ್ಯುನ್ನತ ದರ್ಜೆ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ ಶೇ.9.0 ಫಲಿತಾಂಶ ದೊರೆತಿದೆ.
ವಿಜ್ಞಾನ ವಿಭಾಗದಲ್ಲಿ ಎ.ಎನ್.ಮನೋಜ್(572), ಎ.ಎಲ್.ವಿದ್ಯಾಶ್ರೀ(569), ಎಚ್.ಆರ್. ದೀಪ್ತಿ (567), ಎಂ. ಹೇಮಂತಗೌಡ (560), ಎ.ಕೆ. ಸುಶ್ಮಿತಾ 559 ಅಂಕಗಳಿಸಿ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 85 ಮಕ್ಕಳಲ್ಲಿ 77 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 13 ಅತ್ಯುನ್ನತ ದರ್ಜೆ ಪಡೆದಿದ್ದು ಶೇ.90.58 ಫಲಿತಾಂಶ ಬಂದಿದೆ. ಎಚ್.ವೈ.ಶ್ರೀರಕ್ಷಾ(560), ಎಂ.ಪಿ.ಕೀರ್ತನಾ (558) ಎನ್.ಶ್ರಾವ್ಯ(558), ವಿ.ಎಸ್.ಸಂದೀಪ್(548), ಎಚ್.ಎಸ್.ಮೌನಶ್ರೀ(543) ಹೆಚ್ಚಿನ ಅಂಕ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪಿ.ನವೀನ್ ತಿಳಿಸಿದ್ದಾರೆ.